ಸರ್ಕಾರಿ ಪ್ರಾಥಮಿಕ ಶಾಲೆಯ 80 ಮಕ್ಕಳಿಗೆ ಶಿಕ್ಷಣ

ಸರ್ಕಾರಿ ಪ್ರಾಥಮಿಕ ಶಾಲೆಯ 80 ಮಕ್ಕಳಿಗೆ ಶಿಕ್ಷಣ

ಆಳಂದ : ತಾಲ್ಲೂಕಿನ ಕಮಲಾನಗರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಕೊರೋನಾ ಹಾವಳಿಯ ನಡುವೆಯೂ ಒಂದು ವಾರದಿಂದ ವಠಾರ ಶಾಲೆ ಆರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಜೂನ್ ತಿಂಗಳಲ್ಲಿ ಆರಂಭವಾಗಬೇಕಿದ್ದ ಶಾಲೆಗಳು ಕೊರೋನಾ ಸಂಕಷ್ಟದಿಂದ ಇನ್ನೂ ತೆರದಿಲ್ಲ. ಗ್ರಾಮದ ಮಕ್ಕಳು ಇತ್ತ ಮನೆಯಲ್ಲಿಯೂ ಕುಳಿತುಕೊಳ್ಳದೆ, ಅತ್ತ ಶಾಲೆಗೂ ಹೋಗದೆ ಓದು, ಅಭ್ಯಾಸ ಮರೆಯುವ ಸ್ಥಿತಿ ಕಂಡು ಬಂದಿದೆ.

ಗ್ರಾಮದ ಭಜರಂಗಬಲಿ ದೇವಸ್ಥಾನ, ಮಲ್ಲಯ್ಯ ದೇವಸ್ಥಾನ, ಹನುಮಾನ ದೇವಸ್ಥಾನದಲ್ಲಿ ಈಗ ಮಕ್ಕಳ ಕಲಿಕಾ ಚಟುವಟಿಕೆಗಳು ಶುರುವಾಗಿವೆ. ಶಾಲೆಯಲ್ಲಿ ಒಟ್ಟು 139 ಜನ ವಿದ್ಯಾರ್ಥಿಗಳಿದ್ದಾರೆ.

ಇವರಲ್ಲಿ 80 ಮಕ್ಕಳು ಗ್ರಾಮದ ಆಯಾ ಓಣಿಯ ಮಕ್ಕಳಿಗೆ ಅನುಕೂಲವಾಗುವಂತೆ ವಠಾರ ಶಾಲೆ ಆರಂಭಿಸಿದ ಮೇಲೆ ಬರುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ಗಿರೀಶ ಜಕಾಪುರೆ ತಿಳಿಸಿದರು.

ಕೊರೋನಾ ಭಯವು ಪಾಲಕರಲ್ಲಿ ಇದೆ. ಇದರಿಂದ ಕೆಲ ಪಾಲಕರು ಮಕ್ಕಳಿಗೆ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾರೆ. ನಾವೂ ಸಹ 1ನೇ, 2ನೇ ತರಗತಿ ಮಕ್ಕಳಿಗೆ ವಿನಾಯಿತಿ ನೀಡಿ ಹಿರಿಯ ತರಗತಿ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ಓದು, ಬರಹ, ಸರಳ ಕಲಿಕಾ ಸಾಮರ್ಥ್ಯದ ಚಟುವಟಿಕೆ ಮಾತ್ರ ಕಲಿಸಲಾಗುತ್ತಿದೆ. ಕೊರೋನಾದ ಕುರಿತು ನಿಗದಿತ ಅಂತರ, ಸುರಕ್ಷತೆ, ಸ್ವಚ್ಛತೆ ಹಾಗೂ ಮಾಸ್ಕ್ ಧರಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಸಿಆರ್‌ಸಿ ಬಸವರಾಜ ರೋಳೆ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos