ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ದೇವೇಗೌಡ ಕುಟುಂಬದವರೇ ಎಂಟು!

ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ದೇವೇಗೌಡ ಕುಟುಂಬದವರೇ ಎಂಟು!

ಬೆಂಗಳೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: 40 ಮಂದಿ ಸ್ಟಾರ್ ಪ್ರಚಾರಕರನ್ನು ಜೆಡಿಎಸ್ ಪಟ್ಟಿ ಮಾಡಿದ್ದು, ಅದರಲ್ಲಿ ಎಂಟು ಜನ ದೇವೇಗೌಡ ಅವರ ಕುಟುಂಬಕ್ಕೆ ಸೇರಿದವರೇ ಇದ್ದಾರೆ. ಅಂಬರೀಶ್ ನಂಬಿ 20 ವರ್ಷ ಹಾಳು ಮಾಡಿಕೊಂಡೆ: ಶಿವರಾಮೇಗೌಡ ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ, ಸೂರಜ್ ರೇವಣ್ಣ ಅವರು ದೇವೇಗೌಡ ಅವರ ಕುಟುಂಬದ ಸ್ಟಾರ್ ಪ್ರಚಾರಕರು. ಇವರನ್ನು ಹೊರತುಪಡಿಸಿ, ಸಚಿವರಾದ ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ , ಬಂಡೆಪ್ಪ ಕಾಶಂಪೂರ್, ಎಸ್.ಆರ್.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ವೆಂಕಟರಾವ್‍ನಾಡಗೌಡ, ಸಾ.ರಾ.ಮಹೇಶ್, ಎಂ.ಸಿ.ಮನಗೂಳಿ ಅವರು ಜೆಡಿಎಸ್‍ನ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ? ಇನ್ನುಳಿದಂತೆ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಎಸ್.ಎ.ನೀರಾವರಿ, ಎನ್.ಎಚ್.ಕೋನರೆಡ್ಡಿ, ಬಿ.ಬಿ.ನಿಂಗಯ್ಯ,ಕೆ.ಎಂ.ತಿಮ್ಮರಾಯಪ್ಪ, ರಮೇಶ್‍ಬಾಬು ಅವರು ಕೂಡ ಜೆಡಿಎಸ್‌ನ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos