ಐಪಿಎಲ್ ನಿಂದ ಸ್ಟಾರ್‌ ಆಟಗಾರ ಔಟ್!

ಐಪಿಎಲ್ ನಿಂದ ಸ್ಟಾರ್‌ ಆಟಗಾರ ಔಟ್!

ಬೆಂಗಳೂರು: ಐಪಿಎಲ್ ಆರಂಭಕ್ಕೂ ಮುನ್ನ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೊಂದಿಗೆ ಟ್ರೇಡ್ ಮಾಡಿಕೊಂಡು ಕೊಂಚ ಹಿನ್ನಡೆ ಅನುಭವಿಸಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.

ಎಡ ಪಾದದ ಗಾಯದಿಂದಾಗಿ ಭಾರತದ ವೇಗಿ ಬೌಲರ್ ಮೊಹಮ್ಮದ್ ಶಮಿ ಐಪಿಎಲ್ 2024 ರಿಂದ ಹೊರಗುಳಿದಿದ್ದಾರೆ ಎಂದು ಮೂಲಗಳು ತಿಳಿಸಿದೆ. ಮೊಹಮ್ಮದ್ ಶಮಿ ಇಂಗ್ಲೆಂಡ್ನಲ್ಲಿ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆಯೆಂದು ಬಿಸಿಸಿಐ ಮೂಲಗಳು ತಿಳಿಸಿದ್ದು. ಈ ಹಿನ್ನಲೆ ಶಮಿ ಐಪಿಎಲ್ 2024 ರಿಂದ ಹೊರಗೆ ಉಳಿಯಲಿದ್ದಾರೆ.

ಶಮಿ ಗುಜರಾತ್ ತಂಡದ ವೇಗದ ದಾಳಿ ನಾಯಕರಾಗಿದ್ದರು ಈಗಾಗಲೇ ತಮ್ಮ ವರ್ಚಸ್ವಿ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಸೋತಿರುವ ಫ್ಯಾನ್ಚೈಸಿಗೆ ಇದು ಗಮನಾರ್ಹ ಒಡೆತವಾಗಿದೆ.ಈ ಬಾರಿ ತಂಡದ ನಾಯಕತ್ವವನ್ನು ಶುಭ್​ಮನ್​ ಗಿಲ್​ಗೆ ನೀಡಿದೆ. ಇದೀಗ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಗಿಲ್, ಈ ಇಬ್ಬರು ಅನುಭವಿಗಳ ಅಲಭ್ಯತೆಯಲ್ಲಿ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos