ಸ್ಟೇಡಿಯಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಸ್ಟೇಡಿಯಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಮಹದೇವಪುರ, ಅ. 26: ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಯಾವುದೆ ಖಾಸಗಿ ಶಾಲೆಗಿಂತ ಕಡಿಮೆ ಎಂಬ ಭಾವನೆ ಬರಬಾರದೆಂಬ ಉದ್ದೇಶದಿಂದ ಹೂಡಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಸ್ಥಳಿಯ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಕ್ಷೇತ್ರದ ಹೂಡಿ ವಾರ್ಡಿನ ಕಾಲೇಜಿನಲ್ಲಿ ನಿರ್ಮಾಣಗೊಂಡಿದ್ದ ತರಗತಿ ಕೊಠಡಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ 8 ಕೊಠಡಿಗಳ ಉದ್ಘಾಟನೆ ಮಾಡಿದರು.

ಹೂಡಿ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಸಾದರಮಂಗಲ ಕೆರೆ ಮತ್ತು ಚಟ್ ಪೂಜಾ ಕಲ್ಯಾಣಿ ಪರಿವೀಕ್ಷಣೆ, ವಾರ್ಡ್‌ ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ, ರಾಜಕಾಲುವೆ ಮತ್ತು ಸರ್ವೀಸ್ ರಸ್ತೆ ಪರಿವೀಕ್ಷಣೆ, ಕೋಡಿಗೆಹಳ್ಳಿ ರಸ್ತೆ ಹಾಗೂ ಬಾಲಾಜಿ ಬಡಾವಣೆಯಿಂದ ಸ್ಮಶಾನ ರಸ್ತೆ ಪರಿವೀಕ್ಷಣೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ರಾಜಾ ರೆಡ್ಡಿ, ಮುಖಂಡರಾದ ವೆಂಕಟಸ್ವಾಮಿ ರೆಡ್ಡಿ, ಜಯಚಂದ್ರ ರೆಡ್ಡಿ, ಹೂಡಿ ಪಿಲ್ಲಪ್ಪ, ನಾರಾಯಣ ರೆಡ್ಡಿ, ಸತೀಶ್, ಅಂಜಿನಪ್ಪ, ಈಶ್ವರಚಾರಿ, ಅನೂಪ್ ರೆಡ್ಡಿ ಸೇರಿದಂತೆ ಹಲವಾರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos