ಶ್ರೀಸಿದ್ದಪ್ಪಾಜಿ ಜಾತ್ರೆಗೆ ಭರದ ಸಿದ್ಧತೆ

ಶ್ರೀಸಿದ್ದಪ್ಪಾಜಿ ಜಾತ್ರೆಗೆ ಭರದ ಸಿದ್ಧತೆ

ಕೊಳ್ಳೇಗಾಲ, ಜ. 7 : ತಾಲೂಕಿನ ಚಿಕ್ಕಲ್ಲೂರು ಶ್ರೀಸಿದ್ದಪ್ಪಾಜಿ ಜಾತ್ರೆ ಜ.10ರಿಂದ ಜ.14ರ ವರೆಗೆ 5 ದಿನಗಳ ಕಾಲ ನಡೆಯುವ ಹಿನ್ನೆಲೆ ಜಾತ್ರಾ ಸಿದ್ಧತೆ ಭರದಿಂದ ಸಾಗಿದೆ.
ಜಾತ್ರಾ ಆವರಣದಲ್ಲಿ ವ್ಯಾಪಾರ ವಹಿವಾಟು ಆರಂಭಿಸಲು ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವರ್ತಕರು, ಈಗಾಗಲೇ ನಿಗದಿಗೊಳಿಸಿರುವ ಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿದ್ದಾರೆ.
ತೆಳ್ಳನೂರು ಗ್ರಾಪಂ ಆಡಳಿತಕ್ಕೆ ಸೇರಿದ ಸ್ಥಳಗಳಲ್ಲಿ ಹೋಟೆಲ್ ವ್ಯಾಪಾರಸ್ಥರು ಇಂದಿನಿಂದಲೇ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದು, ಮಿಠಾಯಿ ವ್ಯಾಪಾರಿಗಳು, ಮಕ್ಕಳ ಆಟಿಕೆ ಸಾಮಗ್ರಿ ಹಾಗೂ ಕೃಷಿ ಉಪಕರಣ ಮಾರಾಟ ಮಳಿಗೆ ನಿರ್ಮಾಣಗೊಂಡಿವೆ.
ಶ್ರೀಸ್ವಾಮಿ ದೇಗುಲ, ಸಿದ್ದಪ್ಪಾಜಿ ಹಳೇ ಮಠಗಳಿಗೆ ಸುಣ್ಣ, ಬಣ್ಣ ಬಳಿಸಿರುವ ಹಿನ್ನೆಲೆ ದೇಗುಲ ಕಂಗೊಳಿಸುತ್ತಿದೆ.
ಹಳೇ ಮಠಾಧ್ಯಕ್ಷ ಬಿ.ಎಲ್.ಪ್ರಭುದೇವರಾಜೇ ಅರಸ್ ಹಾಗೂ ದೇವಸ್ಥಾನದ ನಿರ್ಗಮಿತ ವ್ಯವಸ್ಥಾಪಕ ಬಸವರಾಜು ನಡುವಿನ ಶೀತಲ ಸಮರದ ಹಿನ್ನೆಲೆ ದೇಗುಲದ ಆವರಣದಲ್ಲಿ ಅಗೆಯಲಾಗಿದ್ದ ಪಡಸಾಲೆ ನಿರ್ಮಾಣ ಕಾಮಗಾರಿ ಭರದಿಂದ ಮರು ನಿರ್ಮಾಣಗೊಳ್ಳುತ್ತಿದ್ದು, ಜಾತ್ರೆ ಆರಂಭದ ವೇಳೆಗೆ ಮುಕ್ತಾಯಗೊಳ್ಳುವ ಲಕ್ಷಣ ಕಂಡುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos