ಕೋಮು ಹಿಂಸಾಚಾರ : ಅಮಾಯಕ ಸಾವು

ಕೋಮು ಹಿಂಸಾಚಾರ : ಅಮಾಯಕ ಸಾವು

ಶ್ರೀಲಂಕಾ, ಮೇ. 14, ನ್ಯೂಸ್‍ ಎಕ್ಸ್ ಪ್ರೆಸ್‍ : ಶ್ರೀಲಂಕಾದ ಕೊಲಂಬೊದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.  ಮುಸ್ಲಿಂರ ವಿರುದ್ಧ ಜನರು ಸಿಡಿದ್ದೆದ್ದಿದ್ದಾರೆ. ಮುಸ್ಲಿಂ ಜನರ ಮೇಲೆ ದಾಳಿ ಮುಂದುವರೆದಿದೆ. ಕ್ರಿಶ್ಚಿಯನ್ನರೊನ್ನೊಳಗೊಂಡ ಗುಂಪುಗಳು, ಮುಸ್ಲಿಂ ಸಮುದಾಯದವರ ಒಡೆತನದ ಅಂಗಡಿಗಳು, ವಾಹನಗಳು ಹಾಗೂ ಮಸೀದಿಗಳ ಮೇಲೆ ಮನಸೋಇಚ್ಛೆ ದಾಳಿ ನಡೆಸುತ್ತಿದ್ದಾರೆ.  ಗುಂಪು ಘರ್ಷಣೆಯ ಹಲ್ಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಮೂರು ಜಿಲ್ಲೆಗಳಲ್ಲಿ ಕರ್ಪ್ಯೂ ಹೇರಲಾಗಿದೆ.

ಫೇಸ್‍ ಬುಕ್‍, ವಾಟ್ಸಾಪ್‍ ನಿರ್ಬಂಧ..!

ಪುಟ್ಟಾಲಾಂ ಜಿಲ್ಲೆಯಲ್ಲಿ ಮೊದಲು  ಘರ್ಷಣೆ ಶುರುವಾಗಿದೆ. ಮರಗೆಲಸದ ಅಂಗಡಿಗೆ ನುಗ್ಗಿರುವ ಗುಂಪು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದೆ. ಆಸ್ಪತ್ರೆಗೆ ದಾಖಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ.  ಚರ್ಚ್ ಹಾಗೂ ಹೊಟೇಲ್‍ಗಳಲ್ಲಿ ನಡೆದ ಆತ್ಮಾಹುತಿ ದಾಳಿಯ ನಂತರ ಶ್ರೀಲಂಕಾದಲ್ಲಿ ಮುಸ್ಲಿಂಮರ ಮೇಲೆ ದೌರ್ಜನ್ಯ ಎಸಗಲಾಗ್ತಿದೆ. ಶ್ರೀಲಂಕಾದಲ್ಲಿ ನಡೆದಿರೋ ಗಲಬೆಯಲ್ಲಿ ಇದು ಮೊದಲ ಸಾವಾಗಿದೆ. ಗಲಭೆ ಪ್ರಕರಣಗಳು ನಡೆದಿರೋ ಭಾಗದ ಜನರು ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ. ಫೇಸ್‍ ಬುಕ್‍, ವಾಟ್ಸಾಪ್‍ ಇತರೆ ಸಾಮಾಜಿಕ ಮಾಧ್ಯಮಗಳ ಬಳಕೆ ನಿಷೇಧಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿರ್ಬಂಧ ಹೇರುವಂತೆ ದೂರಸಂಪರ್ಕ ಪ್ರಾಧಿಕಾರವು ಇಂಟರ್ನೆಟ್‍ ಸೇವಾದಾರರಿಗೆ ಸೂಚಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos