ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 359ಕ್ಕೆ

ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 359ಕ್ಕೆ

ಕೊಲಂಬೋ, ಏ. 24, ನ್ಯೂಸ್ ಎಕ್ಸ್ ಪ್ರೆಸ್: ಈಸ್ಟರ್ ಏ.12ರಂದು ಕೊಲಂಬೋ ಸುತ್ತಮುತ್ತ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 359ಕ್ಕೆ ತಲುಪಿದೆ. ಮತ್ತಷ್ಟು ಶಂಕಿತರನ್ನು ಬಂಧಿಸಲಾಗಿದೆ. ಪೊಲೀಸ್ ವಕ್ತಾರ ರುವಾನ್ ಗುಣಶೇಖರ ಇಂದು ಮಾತನಾಡಿ, ನೆನ್ನೆ ರಾತ್ರಿ 18 ಜನರನ್ನು ಬಂಧಿಸಿದ್ದು, ಒಟ್ಟಾರೆಯಾಗಿ ವಶಕ್ಕೆ ಪಡೆದವರ ಸಂಖ್ಯೆ 58 ಆಗಿದೆ ಎಂದಿದ್ದಾರೆ.

ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಮಾತನಾಡಿ, ಇನ್ನೂ ಹಲವು ಶಂಕಿತರು ಸ್ಫೋಟಕಗಳೊಂದಿಗೆ ದೇಶದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಈಗ ಚರ್ಚ್ ಗಳು ಹಾಗೂ ಹೋಟೆಲ್ ಗಳು ಸೇರಿದಂತೆ ಇತರೆಡೆ ನಡೆದ ದಾಳಿಗಳು ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ದಾಳಿಗೆ ಪ್ರತೀಕಾರ ಹೇಳುವ ಸಲುವಾಗಿ ಕೈಗೊಂಡಿರುವಂಥವು ಎಂದು ಸರಕಾರದ ಉನ್ನತಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos