ಕೊಲಂಬೋದಲ್ಲಿ ಮತ್ತೊಂದು ಸ್ಫೋಟ

ಕೊಲಂಬೋದಲ್ಲಿ ಮತ್ತೊಂದು ಸ್ಫೋಟ

ಕೊಲಂಬೋ, . 25, ನ್ಯೂಸ್ ಎಕ್ಸ್ ಪ್ರೆಸ್: ಏ.21ರಂದು ನಡೆದ ಉಗ್ರದಾಳಿಯಲ್ಲಿ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಉಗ್ರದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತಿದ್ದು, ಚರ್ಚ್ ಮತ್ತು ಹೊಟೇಲ್ ಗಳನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡಿತ್ತು ಎನ್ನಲಾಗಿದೆ.

ಭೀಕರ ಉಗ್ರದಾಳಿಯಿಂದ ಚೇತರಿಸಿಕೊಳ್ಳುವುದಕ್ಕೇ ಸಾಧ್ಯವಾಗದ ರೀತಿಯಲ್ಲಿ ಶ್ರೀಲಂಕಾದಲ್ಲಿ ಮತ್ತೆ ಮತ್ತೆ ಸ್ಫೋಟದ ಸದ್ದು ಕೇಳುತ್ತಲೇ ಇದೆ.

ಇದೀಗ ಶ್ರೀಲಂಕಾ ರಾಜಧಾನಿ ಕೊಲಂಬೋದಿಂದ 40 ಕಿಮೀ ದೂರದಲ್ಲಿರುವ ಪುಗೋಡಾ ಎಂಬ ನಗರದಲ್ಲಿ ಸ್ಫೋಟದ ಸದ್ದು ಕೇಳಿದ್ದು, ಉಗ್ರದಾಳಿಯೇ ಇರಬಹುದು ಎಂದು ಶಂಕಿಸಲಾಗಿದೆ.

ಸ್ಫೋಟದ ಸುದ್ದಿಯನ್ನು ರಾಯ್ಟರ್ಸ್ ನ್ಯೂಸ್ ಆರ್ಗನೈಸೇಶನ್ ವರದಿ ಮಾಡಿದೆ.

ಕಸದ ತೊಟ್ಟಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಖಾಲಿ ಜಾಗವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 21 ರಂದು ಶ್ರೀಲಂಕಾದಲ್ಲಿ 8 ಕಡೆ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕೆ ಎಲ್ಲೆಲ್ಲೂ ಟಾಸ್ಕ್ ಪೋರ್ಸ್ ಪರಿಶೀಲನೆ ನಡೆಸುತ್ತಿದ್ದು, ನಿನ್ನೆಯೂ ಬೈಕ್ ವೊಂದರಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಬೈಕ್ ಅನ್ನೇ ಸ್ಫೋಟಿಸಲಾಗಿತ್ತು. ಆದರೆ ಇದು ಬಾಂಬ್ ಸ್ಫೋಟವಲ್ಲ ಎಂದು ನಂತರ ಶ್ರೀಲಂಕಾ ಸ್ಫಷ್ಟನೆ ನೀಡಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos