ನೇತ್ರಾವತಿಯಲ್ಲಿ ಮತ್ತೆ ನೀರು

ನೇತ್ರಾವತಿಯಲ್ಲಿ ಮತ್ತೆ ನೀರು

ಮಂಗಳೂರು, ಜೂನ್. 13: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ, ನೇತ್ರಾವತಿ ನದಿಯ ಸ್ನಾನ ಘಟ್ಟಕ್ಕೆ ನೀರು ಬಂದಿದ್ದು, ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೆಲ ದಿನಗಳ ಕಾಲ ಭಕ್ತರಿಗೆ ಪ್ರವಾಸ ಮುಂದೂಡುವಂತೆ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದ್ದರು. ಅನ್ನದಾಸೋಹಕ್ಕೂ ಕೂಡ ನೀರಿನ ಬರದ ಬಿಸಿ ತಟ್ಟಿತ್ತು.

ನಿತ್ಯ ಅನ್ನದಾಸೋಹಕ್ಕೆ ಪ್ರತಿ ನಿತ್ಯ 3 ಲಕ್ಷ ಲೀ. ನೀರು ಗತ್ಯವಿದ್ದು, ಬರದ ಹಿನ್ನೆಲೆಯಲ್ಲಿ  ಅನ್ನದಾಸೋಹಕ್ಕೆ ಸ್ಟೀಲ್ ತಟ್ಟೆಯ ಬದಲಾಗಿ ಎಲೆಗಳ ಬಳಕೆಯನ್ನು ಮಾಡಲಾಗಿತ್ತು. ನಿತ್ಯ 30ರಿಂದ 40ಸಾವಿರ ಭಕ್ತರಿಗೆ ಇಲ್ಲಿ ಅನ್ನ ದಾಸೋಹ ನಡೆಯಲಿದ್ದು, ತಯಾರಿಗೆ ಭಾರೀ ಪ್ರಮಾಣದ ಶುದ್ದ ನೀರಿನ ಅಗತ್ಯವಿದೆ. ಭಕ್ತರು ಅದಷ್ಟು ಭೇಟಿ ನೀಡುವುದನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾರು. ಆದರೆ ಇದೀಗ ನೇತ್ರಾವತಿ ಸ್ನಾನಘಟ್ಟಕ್ಕೆ ನೀರು ಬಂದಿರುವುದರಿಂದ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos