ಶ್ರೀ ಸಿದ್ದರಾಮೇಶ್ವರ ಜಯಂತಿ

ಶ್ರೀ ಸಿದ್ದರಾಮೇಶ್ವರ ಜಯಂತಿ

ಬಾಗೇಪಲ್ಲಿ, ಜ. 14:  ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ, ಪುರಸಭೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ  ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು, ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸರಳ ಸುಂದರವಾಗಿ ಆಚರಿಸಲಾಯಿತು.

ಈ ಸರಳ ಸುಂದರ ಜಯಂತಿ ಕಾರ್ಯಕ್ರಮಕ್ಕೆ ತಾಲ್ಲೂಕಿನ ಭೋವಿ ಜನಾಂಗದ ಹಲವು ಮುಖಂಡರುಗಳು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಗೂ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ  ಶ್ರೀ ನರೇಂದ್ರಬಾಬು ರವರು ಮಾತನಾಡುತ್ತಾ, ” ಜನಾಂಗದ ಆಷಾಜ್ಯೋತಿ, ಯುವಪೀಳಿಗೆಯ ನೇತಾರ, ಸಿದ್ದರಾಮೇಶ್ವರರ ತತ್ವಾಧರ್ಶಗಳನ್ನು ಮೈಗೂಡಿಸಿಕೊಂಡು ಇಂದಿನ ಯುವ ಜನಾಂಗ ಮುಂದುವರೆಯಬೇಕಾಗಿದೆ. ಭೋವಿ ಜನಾಂಗಕ್ಕೆ ಸರ್ಕಾರದ ಕೊಡುಗೆಗಳು ಕೂಡ ಇನ್ನೂ ಹೆಚ್ಚಾಗಬೇಕು. ನಮ್ಮ ತಾಲ್ಲೂಕಿನ ಜನಪ್ರಿಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರು ಕೂಡ ಈ ಜನಾಂಗದ ಅಭಿವೃದ್ಧಿಗೆ ಸದಾ ಸಿದ್ಧರಿದ್ದಾರೆ.

ತಾಲ್ಲೂಕಿನ ಭೋವಿ ಜನಾಂಗದ ಜನ, ಕೆಲವು ವಿದ್ಯಾವಂತ ಯುವಕರು ಮಾತ್ರ ಸರ್ಕಾರಿ ಹಾಗು ಖಾಸಾಗಿ  ಹುದ್ದೆಗಳಲ್ಲಿ ಸೇರಿಕೊಂಡು ಜೀವನ ಸಾಗಿಸುತ್ತಿದ್ದು, ಇನ್ನು ಸಾಕಷ್ಟು ಜನ ಇಡೀ ತಮ್ಮ ಜೀವನವನ್ನು ಪಾಯ ತೆಗೆಯುವುದು, ಕಲ್ಲು ಕ್ವಾರಿಗಳಲ್ಲಿ ದಿನನಿತ್ಯದ ಕೂಲಿಗಾರರಾಗಿ ಉಳಿದುಬಿಟ್ಟಿದ್ದಾರೆ. ಈ ದುರಂತ ದುಸ್ಥಿತಿ ದೂರಾಗಬೇಕು, ಅವರು ಕೂಡ ಒಳ್ಳೆಯ ಆರ್ಥಿಕತೆಯ ಜೀವನ ನಡೆಸಬೇಕಾಗಿದೆ. ತಾಲ್ಲೂಕಿನಾದ್ಯಂತ ಕಲ್ಲು ಗಣಿಗಾರಿಕೆಗಳು ಎತೇಚ್ಛವಾಗಿ  ನಡೆಯುತ್ತಿವೆ. ಇವುಗಳಲ್ಲಿ ಒಂದೂ ಕೂಡ ನಮ್ಮ ಸ್ಥಳೀಯ ಭೋವಿ ಜನಾಂಗಕ್ಕೆ ಮೀಸಲ್ಟಿಲ್ಲ. ಅದಕ್ಕಾಗಿ ತಾಲ್ಲೂಕಿನ ದಂಡಾಧಿಕಾರಿಗಳು ಈ ಬಗ್ಗೆ ಎಚ್ಚರಿಕೆವಹಿಸಿ, ಕಲ್ಲು ಗಣಿಗಾರಿಕೆ ಪರವಾನಿಗೆಗಳನ್ನು ನೀಡಿದಾಗ, ತಾಲ್ಲೂಕಿನ ಭೋವಿ ಜನಾಂಗದ ಜನತೆಗೆ ಮಾತ್ರ ನೀಡಿ, ಈ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲು ಸೂಚನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ದಂಡಾಧಿಕಾರಿಗಳಾದ ಶ್ರೀ ನಾಗರಾಜ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾರಾಯಣಮ್ಮ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾದ ಸರಸ್ವತಮ್ಮ ಶಿವರಾಮರೆಡ್ಡಿ, ಭೋವಿ ಸಂಘದ ತಾ ಅಧ್ಯಕ್ಷ ಬಾಬು, ಪುರಸಭೆ ಸದಸ್ಯರಾದ ನಾಗರತ್ನಮ್ಮ, ಸಾಕ್ಷರತಾ ಶಿವಪ್ಪ, ಮುಖ್ಯಾಧಿಕಾರಿ ಪಂಕಜಾರೆಡ್ಡಿ, ರೆವಿನ್ಯೂ ಅಧಿಕಾರಿ ಶ್ರೀನಿವಾಸ, ತಾ. ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸೋಮು, ಬಿ.ವಿ.ವೆಂಕಟರಮಣ, ಸಿ.ಡಿ.ಗಂಗುಲಪ್ಪ ಹಾಗೂ ಇತರರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos