ವಿಶ್ವಕಪ್‌: ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ!

ವಿಶ್ವಕಪ್‌: ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ!

ಬೆಂಗಳೂರು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಈ ಪೈಕಿ ದಕ್ಷಿಣ ಆಫ್ರಿಕಾ ತಂಡವು ಕೊಂಚ ಮೇಲುಗೈ ಸಾಧಿಸಿದೆ. ಆದರಿಂದ ಇವತ್ತೀನ ಪಂದ್ಯದಲ್ಲಿ ಶ್ರೀಲಂಕಾ ದಕ್ಷಿಣ ಆಫ್ರಿಕಾ ವಿರುದ್ದ ಗೆಲ್ಲುತ್ತದೆ ಎಂದು ನೊಡೋನ. ಗಾಯಾಳುಗಳ ಸಮಸ್ಯೆ ನಡುವೆಯೇ ಈ ಬಾರಿ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿರುವ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಂದು ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯ ದ.ಆಫ್ರಿಕಾದ ಬ್ಯಾಟರ್‌ಗಳು ಹಾಗೂ ಶ್ರೀಲಂಕಾದ ಬೌಲರ್‌ಗಳ ನಡುವಿನ ಹಣಾಹಣಿ ಎಂದೇ ಕರೆಸಿಕೊಳ್ಳುತ್ತಿದೆ.
ಆಕ್ರಮಣಕಾರಿ ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಕ್ವಿಂಟನ್ ಡಿ ಕಾಕ್, ಏಯ್ಡನ್ ಮಾರ್ಕ್‌ರಮ್‌ರನ್ನು ಲಂಕಾ ಬೌಲರ್ ಗಳು ಎಷ್ಟರ ಮಟ್ಟಿಗೆ ಕಟ್ಟಿಹಾಕಲಿದ್ದಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚು. ದ.ಆಫ್ರಿಕಾ ಪ್ರಮುಖ ವೇಗಿಗಳಾದ ನೋಕಿಯಾ, ಮಗಾಲ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಅತ್ತ ಶ್ರೀಲಂಕಾ 2023ರಲ್ಲಿ ಆಡಿರುವ 22 ಪಂದ್ಯಗಳಲ್ಲಿ 14ರಲ್ಲಿ ಗೆದ್ದಿದೆ. ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಎದುರಾಳಿ ತಂಡಗಳನ್ನು ಆಲೌಟ್ ಮಾಡಿದೆ. ಮೆಂಡಿಸ್, ಪತಿರನ, ಅಸಲಂಕ, ವೆಲ್ಲಲಗೆ ತಂಡದ ಟ್ರಂಪ್‌ಕಾರ್ಡ್. ಮಧುಶನಕ, ಶಾನಕ, ಲಹಿರು ಕುಮಾರ ಮೇಲೂ ಹೆಚ್ಚಿನ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ ಟೂರ್ನಿಯಲ್ಲಿ ಲಂಕಾ ತಂಡವು ಫೈನಲ್ ಪ್ರವೇಶಿಸಿತ್ತು. 2023ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ವಿಫಲವಾಗಿದ್ದ ಲಂಕಾ ತಂಡವು ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ತೋರಿ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿದೆ. ಇದೀಗ ಭಾರತದಲ್ಲಿ ಹರಿಣಗಳನ್ನು ಕಟ್ಟಿಹಾಕಲು ಲಂಕಾ ಪಡೆ ಸಜ್ಜಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos