ವಿಶ್ವಕಪ್:‌ ಶ್ರೀಲಂಕಾ-ಆಫ್ಘನ್‌ ಕಾದಾಟ

ವಿಶ್ವಕಪ್:‌ ಶ್ರೀಲಂಕಾ-ಆಫ್ಘನ್‌ ಕಾದಾಟ

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಕುತೂಹಲ ಕೆರಳಿಸುತ್ತಿದೆ. ನಿನ್ನೆ ನಡೆದ 30ನೇ ಪಂದ್ಯದಲ್ಲಿ ಶ್ರೀಲಂಕಾ-ಆಫ್ಘನ್‌ ತಂಡವನ್ನು ಎದುರಿಸಿತ್ತು. ಸೆಮೀಸ್‌ ರೇಸಲ್ಲಿ ಉಳಿಯಲು ಶ್ರೀಲಂಕಾ-ಆಫ್ಘನ್‌ ಕಾದಾಟ.

ಹ್ಯಾಟ್ರಿಕ್‌ ಸೋಲುಗಳ ಬಳಿಕ ಸತತ 2 ಪಂದ್ಯ ಗೆದ್ದಿರುವ ಶ್ರೀಲಂಕಾ ಹಾಗೂ ಬಲಿಷ್ಠ ತಂಡಗಳನ್ನು ಸೋಲಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿರುವ ಅಫ್ಘಾನಿಸ್ತಾನ ತಂಡಗಳು ಇಂದು ಪರಸ್ಪರ ಮುಖಾಮುಖಿಯಾಗಲಿವೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ.

ಸದ್ಯ ಎರಡೂ ತಂಡಗಳು ಆಡಿರುವ 5 ಪಂದ್ಯಗಳಲ್ಲಿ ತಲಾ 2 ಗೆಲುವಿನೊಂದಿಗೆ 4 ಅಂಕ ಸಂಪಾದಿಸಿವೆ. ಹೀಗಾಗಿ ಈ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋಲುವ ತಂಡ ನಾಕೌಟ್‌ ಹಾದಿ ಬಹುತೇಕ ಬಂದ್‌ ಆಗಲಿದೆ. ಲಂಕಾ ಗಾಯದ ಸಮಸ್ಯೆಯ ನಡುವೆಯೂ ತನ್ನಿಂದಾಗುವ ಗರಿಷ್ಠ ಪ್ರಮಾಣದ ಆಟ ಪ್ರದರ್ಶಿಸುತ್ತಿದ್ದು, ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಹೀನಾಯ ಸೋಲಿನ ರುಚಿ ತೋರಿಸಿತ್ತು. ಆಫ್ಘನ್ನರನ್ನು ಲಘುವಾಗಿ ಪರಿಗಣಿಸದೆ ನೈಜ ಆಟ ಪ್ರದರ್ಶಿಸಿದರೆ ತಂಡಕ್ಕೆ ಹ್ಯಾಟ್ರಿಕ್‌ ಗೆಲುವು ದಕ್ಕಬಹುದು.

ಅತ್ತ ಆಫ್ಘನ್‌ ತಂಡ ಇಂಗ್ಲೆಂಡ್‌ ಹಾಗೂ ಪಾಕ್‌ ವಿರುದ್ಧದ ಗೆಲುವಿನ ಹುಮ್ಮಸ್ಸಿನಲ್ಲಿದೆ. ತನ್ನ ದಿನದಂದು ಎಷ್ಟೇ ಬಲಿಷ್ಠ ತಂಡಕ್ಕೂ ಸೋಲುಣಿಸಬಲ್ಲ ಆಫ್ಘನ್‌, ಯಾರೂ ಊಹಿಸಲಾಗದ ರೀತಿಯಲ್ಲಿ ಕಳಪೆ ಪ್ರದರ್ಶನ ನೀಡುವುದಕ್ಕೂ ಹೆಸರುವಾಸಿ. ತಜ್ಞ ಸ್ಪಿನ್ನರ್‌ಗಳ ಜೊತೆ ಸ್ಫೋಟಕ ಬ್ಯಾಟರ್‌ಗಳೂ ಅಬ್ಬರಿಸಿದರೆ ಮಾತ್ರ ಮತ್ತೊಂದು ಅಚ್ಚರಿಯ ಫಲಿತಾಂಶ ನಿರೀಕ್ಷಿಸಬಹುದು.

 

 

ಫ್ರೆಶ್ ನ್ಯೂಸ್

Latest Posts

Featured Videos