ಮೈಸೂರಿನಲ್ಲಿ ಇಂದಿನಿಂದ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿ

ಮೈಸೂರಿನಲ್ಲಿ ಇಂದಿನಿಂದ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿ

ಮೈಸೂರು, ಫೆಬ್ರವರಿ 13: ಮೈಸೂರಿನಲ್ಲಿ ಕಳೆದ ವರ್ಷ ನಡೆದ ಕೆಪಿಎಲ್ ಕ್ರಿಕೆಟ್ ಬಳಿಕ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ನಡೆಯಲಿದ್ದು, ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಗರಿಗೆದರಿದೆ. ಭಾರತ ‘ಎ’ ಮತ್ತು ಇಂಗ್ಲೆಂಡ್‌ ಲಯನ್ಸ್ ತಂಡಗಳ ನಡುವಿನ ನಾಲ್ಕು ದಿನಗಳ ಟೆಸ್ಟ್‌ ಪಂದ್ಯ ಇಂದಿನಿಂದ (ಫೆ.13) 16ರವರೆಗೆ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ.

ಕೆಪಿಎಲ್ ಮತ್ತು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಹಲವು ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯಮಟ್ಟದ ಪಂದ್ಯ ನಡೆಯದೆ ಐದು ವರ್ಷಗಳು ಕಳೆದಿವೆ.

2013 ರಲ್ಲಿ ಭಾರತ ‘ಎ’ ಮತ್ತು ವೆಸ್ಟ್‌ ಇಂಡೀಸ್‌ ‘ಎ’ ತಂಡಗಳು ಇಲ್ಲಿ ಪೈಪೋಟಿ ನಡೆಸಿದ್ದವು.

ಕಾರವಾರದಲ್ಲಿ ನಿರ್ಮಾಣವಾಗಲಿದೆ ಇಂಟರ್ ನ್ಯಾಷನಲ್ ಸ್ಟೇಡಿಯಮ್!

2014 ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಕ್ರಿಕೆಟ್‌ ಟೆಸ್ಟ್‌ ಪಂದ್ಯ ನಡೆದಿತ್ತು. ಆ ಬಳಿಕ ಅಂತರರಾಷ್ಟ್ರೀಯ ಪಂದ್ಯವೊಂದಕ್ಕೆ ಆತಿಥ್ಯ ವಹಿಸುವ ಅವಕಾಶ ಲಭಿಸಿರಲಿಲ್ಲ.

ಭಾರತ ‘ಎ’ ತಂಡದಲ್ಲಿ ಕೆ.ಎಲ್‌.ರಾಹುಲ್‌, ಕರುಣ್ ನಾಯರ್‌, ಪ್ರಿಯಾಂಕ್ ಪಾಂಚಾಲ್, ಅಂಕೀತ್ ಭಾವ್ನೆ, ಶಹಬಾಜ್ ನದೀಮ್ ಮುಂತಾದ ಪ್ರಮುಖ ಆಟಗಾರರಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ನೇತೃತ್ವದ ಇಂಗ್ಲೆಂಡ್‌ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

‘ಯುವಾ’ ವಿದ್ಯಾರ್ಥಿಗಳ ರಾಯಭಾರಿಯಾದ ಕ್ರಿಕೆಟರ್ ಪೃಥ್ವಿ

ಬಿಲ್ಲಿಂಗ್ಸ್ ಅವರು ಐಪಿಎಲ್ ಕ್ರಿಕೆಟ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್‌ ತಂಡಗಳ ಪರ ಆಡಿದ್ದಾರೆ. ಏಕದಿನ ಮತ್ತು ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಗ್ಲೇಡ್ಸ್ ಕ್ರೀಡಾಂಗಣದಲ್ಲಿ 2006 ರಿಂದ ಪ್ರಥಮ ದರ್ಜೆ ಪಂದ್ಯಗಳು ನಡೆಯುತ್ತಾ ಬಂದಿವೆ.

ಭಯೋತ್ಪಾದನೆ ಬರಹ: ಆಸ್ಟ್ರೇಲಿಯಾ ಕ್ರಿಕೆಟಿಗ ಖವಾಜಾ ಸಹೋದರ ಬಂಧನ

ಒಟ್ಟು 14 ರಣಜಿ ಪಂದ್ಯಗಳು ಆಯೋಜನೆಯಾಗಿವೆ. 2010ರಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವಿನ ರಣಜಿ ಟ್ರೋಫಿ ಫೈನಲ್‌ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos