8900 ಕೆಜಿ ಸ್ಪೋಟಕ ವಸ್ತು ವಶ

8900 ಕೆಜಿ ಸ್ಪೋಟಕ ವಸ್ತು ವಶ

ಹೈದರಾಬಾದ್, ಅ. 14 : ರಾಚಕೊಂಡ ಪೊಲೀಸರು ಸುಮಾರು 8,900 ಕೆಜಿ ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದು, ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಕೀಸರ ಪೊಲೀಸರು ಮತ್ತು ವಿಶೇಷ ತನಿಖಾ ದಳ ಅಧಿಕಾರಿಗಳು 2 ವಾಹನಗಳಲ್ಲಿದ್ದ ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ವೆಂಕಟರಮಣ ಮತ್ತು ಶ್ರವಣ್ ರೆಡ್ಡಿ ಬಂಧಿತ ಆರೋಪಿಗಳು. ಕೀಸರ ಠಾಣಾಧಿಕಾರಿ ನರೇಂದರ್ ಗೌಡ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos