ಪಿ ಎನ್ ಬಿ ಅಧಿಕಾರಿಗಳು ಆಯೋಗಿಸಿದ್ದ ಸ್ಪೋರ್ಟ್ಸ್ ಮೀಟ್

ಪಿ ಎನ್ ಬಿ ಅಧಿಕಾರಿಗಳು ಆಯೋಗಿಸಿದ್ದ ಸ್ಪೋರ್ಟ್ಸ್ ಮೀಟ್

ಬೆಂಗಳೂರು: ಬ್ಯಾಂಕಿಂಗ್ ವಲಯದಲ್ಲಿ ಸಿಬ್ಬಂದಿಗಳು ಒತ್ತಡದಿಂದ ಕೆಲಸ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಸಿಬ್ಬಂದಿಗಳು ಆಗಾಗ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಮತ್ತು ದೇಹಕ್ಕೆ ಉಲ್ಲಾಸ ಮತ್ತು ಹುಮ್ಮಸ್ಸು ವೃದ್ಧಿಯಾಗುತ್ತದೆ, ಎಂದರು ರತೇಶ್ ಕುಮಾರ್ ಸಿಂಗ್ ಸರ್ಕಲ್ ಹೆಡ್,ಪಂಜಾಬ್ ನ್ಯಾಷನಲ್ ಬ್ಯಾಂಕ್, ಬೆಂಗಳೂರು.

ನಗರದ ಕಬ್ಬನ್ ಪಾರ್ಕ್ ನಲ್ಲಿರುವ ಕೆ.ಜಿಎಸ್ ಕ್ಲಬ್ ನಲ್ಲಿ ಅಖಿಲ ಭಾರತ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಸಂಘ ಬೆಂಗಳೂರು ವತಿಯಿಂದ ಆಯೋಗಿಸಿದ್ದ ಸ್ಪೋರ್ಟ್ಸ್ ಮೀಟ್ 2024 ನಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ರೀಡೆಯಿಂದ ಮನಸ್ಸಿನ ಮೇಲೆ ಉಂಟಾದ ಒತ್ತಡವನ್ನು ಕಡಿಮೆ ಮಾಡಬಹುದು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಸಹಾಯಕರವಾಗಿರುತ್ತದೆ. ಈ ನಿಟ್ಟಿನಲ್ಲಿ ಕಳೆದ ವಾರ ಹೊರಾಂಗಣ ಕ್ರೀಡೆಯಾದ ಕ್ರಿಕೆಟ್ ಮತ್ತು ಇಂದು ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ನಂತಹ ಕ್ರೀಡೆಗಳನ್ನು ಆಯೋಜಿಸಲಾಗಿತ್ತು, ಎಂದರು.

ಎಸ್ ಎಂ ಉದಯ್ ಕುಮಾರ್ ಸರ್ಕಲ್ ಸೆಕ್ರೆಟರಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬೆಂಗಳೂರು ಇವರು ಮಾತನಾಡುತ್ತಾ ದೇಶದಾದ್ಯಂತ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ  139 ಸರ್ಕಲ್ ಗಳಿದ್ದು, ಬೆಂಗಳೂರಿನಲ್ಲಿಯೇ ಸುಮಾರು 850 ನೌಕರರು ಇದ್ದಾರೆ. ಇಂದು ಸುಮಾರು 120ಕ್ಕೂ ಹೆಚ್ಚು ಮಂದಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾಸಕ್ತಿಯನ್ನು ಪ್ರದರ್ಶಿಸಿದರು.

ಕ್ರೀಡೆಗಳನ್ನು ಒಟ್ಟಿಗೆ ಆಡುವುದರಿಂದ ಪರಸ್ಪರ ಅನ್ಯೂನ್ಯತೆ ವೃದ್ಧಿಸುತ್ತದೆ, ಇದು ಅವರು ಮಾಡುವ ಕೆಲಸ ಕಾರ್ಯಗಳನ್ನು ಸಹ  ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಜೆ ಜಿ ಮಾನೆ, ಉಪ ಪ್ರಧಾನ ವ್ಯವಸ್ಥಾಪಕರು, ಸಂತೋಷ್ ಶರ್ಮಾ ಅಶೋಕ್ ಕುಮಾರ್, ಅಖಿಲ ಭಾರತ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬೆಂಗಳೂರು ಸರ್ಕಲ್ ನ ಅಲೆಗ್ಸಾಂಡರ್ ಡಿಸೋಜ ಮತ್ತು ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos