ಎಸ್ಎಲ್ಎಸ್ ಶಾಲೆಯ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆ

ಎಸ್ಎಲ್ಎಸ್ ಶಾಲೆಯ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆ

ದೇವನಹಳ್ಳಿ, ಜು. 25: ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯೋಜಿಸಿದ ಹೋಬಳಿ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ನಗರದ ಹೊಸಕುರುಬರಕುಂಟೆ ರಸ್ತೆಯಲ್ಲಿರುವ ಎಸ್ಎಲ್ಎಸ್ ಸ್ಕೂಲ್ ಆಫ್ ಮಾಡರ್ನ್ ಶಾಲೆಯ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ರೀಡೆ ಹಾಗೂ ಅಥ್ಲೆಟಿಕ್ಸ್ ನಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆಂದು ಶಾಲೆಯ ಕಾರ್ಯದರ್ಶಿ ಡಿ.ಎಸ್.ಧನಂಜಯ ತಿಳಿಸಿದರು.

ನಗರದ ಹೊಸ ಕುರುಬರಕುಂಟೆ ರಸ್ತೆಯಲ್ಲಿರುವ ಎಸ್ಎಲ್ಎಸ್ ಶಾಲೆಯ ಆವರಣದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು. ಹಿರಿಯ ಪ್ರಾಥಮಿಕ ವಿಭಾಗದ ಗಂಡು ಮಕ್ಕಳ ಗುಂಪು ಆಟಗಳಲ್ಲಿ ಮೋಹಿತ್ ನಾಯಕತ್ವದ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನ, ಹೆಣ್ಣು ಮಕ್ಕಳ ಗುಂಪು ಆಟಗಳಲ್ಲಿ ಬಿಂದು ಬಿ ಜೆ ನಾಯಕತ್ವದ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ, ಅರ್ಪಿತಾ ಕುಮಾರಿ ನಾಯಕತ್ವದ ಥ್ರೋಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರೌಢಶಾಲಾ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾವ್ಯ ಶ್ರೀ ಮತ್ತು ತಂಡ ದ್ವಿತೀಯ ಬಹುಮಾನವನ್ನು ಗಳಿಸಿರುತ್ತಾರೆ.

ಹಿರಿಯ ಪ್ರಾಥಮಿಕ ವಿಭಾಗದ ಗಂಡು ಮಕ್ಕಳ ಅಥ್ಲೆಟಿಕ್ಸ್ ನಲ್ಲಿ 600 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರೇಮ್ ಕುಮಾರ್ ದ್ವಿತೀಯ ಸ್ಥಾನ, ಡಿಸ್ಕಸ್ ಥ್ರೋ ಮತ್ತು ಗುಂಡು ಎಸೆತದಲ್ಲಿ ಸಂಜು ಐ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ದರ್ಶನ್ ದ್ವಿತೀಯ ಸ್ಥಾನ, ಉದ್ದ ಜಿಗಿತದಲ್ಲಿ ಮೋಹಿತ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಹೆಣ್ಣು ಮಕ್ಕಳ ಅಥ್ಲೆಟಿಕ್ಸ್ ನಲ್ಲಿ ಕೋಮಲ್ ಚೌಧರಿ ಡಿಸ್ಕಸ್ ಥ್ರೋ ನಲ್ಲಿ ಪ್ರಥಮ ಸ್ಥಾನ ಮತ್ತು 100 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಕೀರ್ತನ ಡಿಸ್ಕಸ್ ಥ್ರೋ ನಲ್ಲಿ ದ್ವಿತೀಯ ಸ್ಥಾನ, ತನಿಶಾ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಪ್ರೌಢಶಾಲಾ ಮಟ್ಟದ ಗಂಡು ಮಕ್ಕಳ ಅಥ್ಲೆಟಿಕ್ಸ್ ವಿಭಾಗದಲ್ಲಿ ಅಜಿತ್-ಹ್ಯಾಮರ್ ಥ್ರೋನಲ್ಲಿ ಪ್ರಥಮ ಸ್ಥಾನ, ಅಜಯ್-800 ಮೀಟರ್ ಓಟದ ಸ್ಪರ್ಧೆಯಲ್ಲಿ  ದ್ವಿತೀಯ ಸ್ಥಾನ, ಚರಣ್ ರಾಜ್-ಡಿಸ್ಕಸ್ ಥ್ರೋ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹೆಣ್ಣು ಮಕ್ಕಳ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ಕೀರ್ತನ ಪಿ- ಹ್ಯಾಮರ್ ಥ್ರೋನಲ್ಲಿ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಜಾವ್ಲಿನ್ ನಲ್ಲಿ ದ್ವಿತೀಯ ಸ್ಥಾನ, ಸ್ವಾತಿ ವಿ- ಹ್ಯಾಮರ್ ಥ್ರೋ ನಲ್ಲಿ ದ್ವಿತೀಯ ಸ್ಥಾನ, ಯಶಸ್ವಿನಿ- ಡಿಸ್ಕಸ್ ಥ್ರೋನಲ್ಲಿ ಪ್ರಥಮ ಸ್ಥಾನ, ಕಾವ್ಯಾಂಜಲಿ- ಡಿಸ್ಕಸ್ ಥ್ರೋ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಶಾಲೆಯಲ್ಲಿ ಪಠ್ಯವಲ್ಲದೇ ಕ್ರೀಡೆಗಳಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ತಾಲೂಕು ಮಟ್ಟದ ಕ್ರೀಡೆಗಳಿಗೆ ಇನ್ನೂ ಹೆಚ್ಚಿನ ತರಬೇತಿಯನ್ನು ನೀಡಲಾಗುವುದು. ಮಾನಸಿಕ ಬೆಳವಣಿಗೆಗೆ ದೈಹಿಕ ಆಟಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಎಂದರು. ತರಬೇತುದಾರರಾದ ದೈಹಿಕ ಶಿಕ್ಷಕ ಮೋಹನ್ ಕುಮಾರ್, ಸಹಶಿಕ್ಷಕ ಗಂಗರಾಜು ಹಾಗೂ ಇತರೆ ಸಿಬ್ಬಂದಿಯನ್ನು ಅಭಿನಂದಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos