ಫೆ.15ರಂದು ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ

ಫೆ.15ರಂದು ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ

ನವದೆಹಲಿ: ಭಾರತದ ಅತ್ಯಂತ ವೇಗವಾಗಿ ಚಲಿಸುವ ಇಂಜಿನ್ ರಹಿತ ರೈಲು ಟ್ರೇನ್ 18 ಈಗ ವಂದೇ ಭಾರತ್ ಎಕ್ಸ್ ಪ್ರೆಸ್ ಎಂಬ ಹೆಸರು ಪಡೆದುಕೊಂಡಿದೆ. ಬಹು ನಿರೀಕ್ಷಿತ ಈ ರೈಲಿಗೆ ಪ್ರಧಾನಿ ಮೋದಿ ಅವರು ಫೆಬ್ರವರಿ 15ರಂದು ಹಸಿರು ನಿಶಾನೆ ತೋರಲಿದ್ದಾರೆ.

ನವದೆಹಲಿಯಿಂದ ವಾರಾಣಸಿಗೆ ಹಾಗೂ ವಾರಾಣಸಿಯಿಂದ ನವದೆಹಲಿಗೆ ಪ್ರಯಾಣಿಸುವ ಜನರ ಬಹು ದಿನದ ಬೇಡಿಕೆಯನ್ನು ಮೋದಿ ಸರ್ಕಾರ ಈಡೇರಿಸುತ್ತಿದ್ದು, ಫೆಬ್ರವರಿ 15ರಂದು ವಂದೇ ಭಾರತ್ ಎಕ್ಸ್ ಪ್ರೆಸ್ ಕಾರ್ಯ ನಿರ್ವಹಿಸಲಿದೆ.

ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅದು ಬೆಳಗ್ಗೆ 10 ಗಂಟೆಗೆ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಗಂಟೆಗೆ 180 ಕಿ.ಮೀ. ವೇಗವಾಗಿ ಚಲಿಸಲು ಸಮರ್ಥವಾಗಿ ಹೊಂದಿದ್ದರೂ ಆರಂಭದಲ್ಲಿ ಈ ಎಕ್ಸ್ ಪ್ರೆಸ್ ವೇಗವನ್ನು ಗಂಟೆಗೆ 130 ಕಿ.ಮೀ. ವೇಗಕ್ಕೆ ನಿಗದಿ ಪಡಿಸಲಾಗಿದೆ. ಈ ಮೂಲಕ ಸಂಚರಿಸಲಿದೆ. ದೆಹಲಿ ಮತ್ತು ವಾರಾಣಸಿ ನಡುವೆ ಇರುವ 770 ಕಿ.ಮೀ. ಅಂತರವನ್ನು 8 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos