ವಿಧಾನಸಭೆಯಲ್ಲಿ ‘ಆಡಿಯೋ’ ಚರ್ಚೆ: ಆರೋಪಕ್ಕೆ ಸ್ಪೀಕರ್ ಬೇಸರ

ವಿಧಾನಸಭೆಯಲ್ಲಿ ‘ಆಡಿಯೋ’ ಚರ್ಚೆ: ಆರೋಪಕ್ಕೆ ಸ್ಪೀಕರ್ ಬೇಸರ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಗುರುಮಿಟ್ಕಲ್ ಕ್ಷೇತ್ರದ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರ ಜೊತೆ ‘ಆಪರೇಷನ್ ಕಮಲ’ಕ್ಕೆ ಸಂಬಂಧಿಸಿದಂತೆ ನಡೆಸಿದ್ದರೆನ್ನಲಾದ ಮಾತುಕತೆಯ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಹಿರಂಗಪಡಿಸಿದ ನಂತರ ಇಂದು ಮಹತ್ವದ ಬೆಳವಣಿಗೆ ನಡೆದಿದೆ.

ಈ ಆಡಿಯೋದಲ್ಲಿ ಮಾತನಾಡಿರುವ ಒಬ್ಬರು, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ 50 ಕೋಟಿ ರೂ. ನೀಡಿದ್ದು, ಯಾವುದೇ ಶಾಸಕ ರಾಜೀನಾಮೆ ನೀಡಿದರೂ ಅವರು ಕೂಡಲೇ ಅಂಗೀಕರಿಸಲಿದ್ದಾರೆ ಎಂದು ಹೇಳಿರುವುದು ರಮೇಶ್ ಕುಮಾರ್ ಅವರಿಗೆ ತೀವ್ರ ನೋವು ತಂದಿದೆ.

ಹೀಗಾಗಿ ಇಂದು ಸದನ ಆರಂಭವಾಗುತ್ತಿದ್ದಂತೆಯೇ ಭಾವುಕತೆಯಿಂದ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ತಮ್ಮ ಈ ಹಿಂದಿನ ಕೆಲ ಅನುಭವಗಳನ್ನು ಹಂಚಿಕೊಂಡಿದ್ದು, ನಾನು ಯಾವತ್ತೂ ಅಸಹಾಯಕರ ಪರವೇ ಹೊರತು, ಎಂದಿಗೂ ಹಣ ಹಾಗೂ ಅಧಿಕಾರಕ್ಕೆ ಆಸೆ ಪಟ್ಟವನಲ್ಲ ಎಂದು ತಿಳಿಸಿದ್ದಾರಲ್ಲದೇ ಒಂದು ಹಂತದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos