ಸೌಂದರ್ಯ ರಕ್ಷಣೆಗೆ ಬೇವಿನ ಸೊಪ್ಪು

ಸೌಂದರ್ಯ ರಕ್ಷಣೆಗೆ ಬೇವಿನ ಸೊಪ್ಪು

ಬೆಂಗಳೂರು. ಫೆ. 01: ಬೇವಿನ ಎಲೆಗಳು, ಬೇರು, ಎಣ್ಣೆ ಎಲ್ಲದರಲ್ಲೂ ಔಷಧೀಯ ಗುಣಗಳಿವೆ. ಇದೊಂದು ಸೌಂದರ್ಯ ಸಾಧನವೆಂದರೆ ತಪ್ಪಾಗಲಾರದು. ಎಂತಹ ಚರ್ಮದ ಸಮಸ್ಯೆಯನ್ನು ಬೇಕಾದರೂ ಈ ಬೇವಿನಿಂದ ದೂರ ಮಾಡಿಕೊಳ್ಳಬಹುದು.

ಮೊಡವೆಗಳು: ಒಂದು ಹಿಡಿ ಬೇವಿನ ಸೊಪ್ಪನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ಹೊತ್ತಿನಲ್ಲಿ ನೀರು ಹಸಿರಾಗಿ ಬದಲಾಗುತ್ತದೆ. ಆರಿದ ಬಳಿಕ ನೀರನ್ನು ಸೋಸಿ ತೆಗೆದಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಆ ನೀರನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಉಜ್ಜಿದರೆ ಸಾಕು, ಮೊಡವೆಗಳು, ಮಚ್ಚೆಗಳು ದೂರವಾಗುತ್ತದೆ.

ಕಾಂತಿ ಹೆಚ್ಚಿಸಲು: ಬಿಸಿಲಿನ ಶಾಖಕ್ಕೆ ಮುಖ ಕಾಂತಿ ಕಳೆದುಕೊಂಡಿದ್ದರೆ, ಬೇವಿನ ಎಲೆಗಳನ್ನು ಹಾಗೂ ಗುಲಾಬಿ ದಳಗಳನ್ನು ಒಣಗಿಸಿಟ್ಟು ಪುಡಿ ಮಾಡಿಕೊಳ್ಳಿ. 2 ಚಮಚ ಪುಡಿಗೆ ಒಂದು ಚಮಚ ಮೊಸರು ಬೆರೆಸಿ ಕಲಸಿ. ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿ ಮುಖಕ್ಕೆ ಹೆಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಸದಾ ಹೀಗೆ ಮಾಡುತ್ತಿದ್ದರೆ ಮುಖವು ಕಳೆ ಕಳೆಯಾಗಿರುತ್ತದೆ.

ಜಿಡ್ಡಿನಂಶವಿದ್ದರೆ: ಬೇವಿನ ಎಲೆಗಳ ಪುಡಿ, ಶ್ರೀಗಂಧದ ಪುಡಿ, ಗುಲಾಬಿ ದಳಗಳ ಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರ ಮಾಡಿಕೊಳ್ಳಿ. 1 ಚಮಚ ಪುಡಿಗೆ 3-4 ಹನಿ ಬೇವಿನ ಎಣ್ಣೆ, ಸ್ವಲ್ಪ ಜೇನು, ನಿಂಬೆ ರಸ ಹಾಕಿ ಕಲಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಒಣಗಿಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡಿದ್ದಲ್ಲಿ ಮುಖವು ತಾಜಾತನವನ್ನು ಪಡೆದುಕೊಳ್ಳುತ್ತದೆ.

 

 

ಫ್ರೆಶ್ ನ್ಯೂಸ್

Latest Posts

Featured Videos