ಮೈತ್ರಿ ಎಫೆಕ್ಟ್; ಎಸ್ಪಿ, ಬಿಎಸ್ಪಿ ಬಾವುಟ ವಿಲೀನ!

ಮೈತ್ರಿ ಎಫೆಕ್ಟ್; ಎಸ್ಪಿ, ಬಿಎಸ್ಪಿ ಬಾವುಟ ವಿಲೀನ!

ಲಖನೌ, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲೇಬೇಕೆಂದು ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳು ತನ್ನ ಪಕ್ಷದ ಬಾವುಟಗಳನ್ನು ವಿಲೀನಗೊಳಿಸಿ 2 ಪಕ್ಷಗಳು ಕಾರ್ಯಕರ್ತರಿಗೆ ಒಂದಾಗಿ ಕೆಲಸ ಮಾಡಬೇಕೆಂದು ಸಂದೇಶ ರವಾನೆ ಮಾಡಿವೆ.

ಕೆಂಪು ಮತ್ತು ನೀಲಿ ಬಣ್ಣದ ಧ್ವಜದ ಮೇಲೆ ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷದ ಚಿಹ್ನೆ ಜೊತೆ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಭಾವಚಿತ್ರವನ್ನು ಕಾಣಬಹುದಾಗಿದೆ. ಈ ಧ್ವಜ ಇದೀಗ ಉತ್ತರ ಪ್ರದೇಶದಲ್ಲಿ ಬಹುಜನರ ಮೆಚ್ಚುಗೆ ಪಾತ್ರವಾಗಿ ಭಾರಿ ಜನಪ್ರಿಯವಾಗಿ ತೊಡಗಿದೆ.

ಬಿಎಸ್‌ಪಿ , ಎಸ್‌ಪಿ ಜಂಟಿ ಬಾವುಟದ ಬಗ್ಗೆ ಅಧಿಕೃತವಾಗಿ ಎರಡು ಪಕ್ಷಗಳು ಯಾವುದೇ ಹೇಳಿಕೆ ಬಿಡುಗಡೆ ಮಾಡದೇ ಇದ್ದರೂ ಕಾರ್ಯಕರ್ತರ ವಲಯದಲ್ಲಿ ಈ ಬಾವುಟ ಭಾರೀ ಬೇಡಿಕೆ ಕಂಡುಬರುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos