ಎಸ್ಪಿ-ಬಿಎಸ್ಪಿ ನಡುವೆ ಕ್ಷೇತ್ರ ಹಂಚಿಕೆಯೂ ಪೂರ್ಣ: ಅಮೇಥಿ, ರಾಯ್ಬರೇಲಿಯಲ್ಲಿ ಅಭ್ಯರ್ಥಿ ಹಾಕದಿರಲು ನಿರ್ಧಾರ

ಎಸ್ಪಿ-ಬಿಎಸ್ಪಿ ನಡುವೆ ಕ್ಷೇತ್ರ ಹಂಚಿಕೆಯೂ ಪೂರ್ಣ: ಅಮೇಥಿ, ರಾಯ್ಬರೇಲಿಯಲ್ಲಿ ಅಭ್ಯರ್ಥಿ ಹಾಕದಿರಲು ನಿರ್ಧಾರ

ಲಖನೌ: ಉತ್ತರ ಪ್ರದೇಶದಲ್ಲಿ ಮೈತ್ರಿ ಘೋಷಣೆ ಮಾಡಿರುವ ಮಾಯಾವತಿ ನೇತೃತ್ವದ ಬಿಎಸ್ಪಿ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ನಡುವೆ ಕ್ಷೇತ್ರಗಳ ಹಂಚಿಕೆ ಕಾರ್ಯವೂ ಪೂರ್ಣಗೊಂಡಿದೆ.

ಉತ್ತರ ಪ್ರದೇಶದಲ್ಲಿ ಒಟ್ಟು 80 ಕ್ಷೇತ್ರಗಳಿದ್ದು, 75 ಕ್ಷೇತ್ರಗಳಲ್ಲಿ ಬಿಎಸ್-ಎಸ್ಪಿ ಸ್ಪರ್ಧೆ ಮಾಡುತ್ತಿವೆ. ಬಿಎಸ್ಪಿ 38ರಲ್ಲಿ, ಎಸ್ಪಿ 37ರಲ್ಲಿ ಸ್ಪರ್ಧೆ ಮಾಡಲಿದೆ. ಇನ್ನುಳಿದ ಐದರ ಪೈಕಿ ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಭ್ಯರ್ಥಿಗಳನ್ನು ಹಾಕದೇ ಇರಲು ಎರಡೂ ಪಕ್ಷಗಳು ನಿರ್ಧರಿಸಿವೆ. ಇನ್ನುಳಿದ 3 ಕ್ಷೇತ್ರಗಳನ್ನು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳಕ್ಕೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ.

ಈ ನಡುವೆ ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ಗಾಂಧಿ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನ್ನೂ ಮೈತ್ರಿ ಕೂಟಕ್ಕೆ ಸೇರಿಸಿಕೊಳ್ಳಬೇಕೆಂದು ಎಸ್ಪಿ ಮತ್ತು ಬಿಎಸ್ಪಿಯಲ್ಲಿನ ಕೆಲ ನಾಯಕರು ತಮ್ಮ ಪಕ್ಷಗಳ ವರಿಷ್ಠರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಮಾಯಾವತಿ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಭ್ಯರ್ಥಿಗಳ ಪಟ್ಟಿ ಕೆಳಕಂಡಂತಿದೆ:

ಫ್ರೆಶ್ ನ್ಯೂಸ್

Latest Posts

Featured Videos