ವಿಶ್ವಕಪ್‌: ರೋಚಕ ಗೆಲವು ಕಂಡ ದಕ್ಷಿಣ ಆಫ್ರಿಕಾ!

ವಿಶ್ವಕಪ್‌: ರೋಚಕ ಗೆಲವು ಕಂಡ ದಕ್ಷಿಣ ಆಫ್ರಿಕಾ!

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಕುತೂಹಲ ಕೆರಳಿಸುತ್ತಿದೆ. ನಿನ್ನೆ ನಡೆದ 26ನೇ ಪಂದ್ಯದಲ್ಲಿ ಬಾಬರ್ ಅಝಂ ನಾಯಕತ್ವದ ಪಾಕಿಸ್ತಾನ ತಂಡ ಟೆಂಬಾ ಬವುಮಾ ಅವರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿತ್ತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು.

ವಿಶ್ವಕಪ್‌ ಟೂರ್ನಿ ಆರಂಭವಾದ 23 ದಿನಗಳ ಬಳಿಕ ಥ್ರಿಲ್ಲರ್ ಪಂದ್ಯಕ್ಕೆ ಸಾಕ್ಷಿಯಾಗಿದೆ. ಇನ್ನೇನು ಗೆಲುವಿನ ಹಂತದಲ್ಲಿದ್ದ ಪಾಕಿಸ್ತಾನ ತಂಡವನ್ನು ದಕ್ಷಿಣ ಆಫ್ರಿಕಾ 1 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿದೆ. ಕೊನೆಯ ವಿಕೆಟ್‌ಗೆ ಗೆಲುವಿಗೆ ಬೇಕಿದ್ದ ಅಮೂಲ್ಯ 11 ರನ್‌ಗಳನ್ನು ಎಚ್ಚರಿಕೆಯಿಂದ ಪೇರಿಸಿದ ಕೇಶವ್‌ ಮಹಾರಾಜ್‌ ಹಾಗೂ ತಬರೇಜ್‌ ಶಮ್ಸಿ ತಂಡದ ರೋಚಕ ಗೆಲುವಿಗೆ ಕಾರಣರಾದರು.

ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ವಿಶ್ವಕಪ್‌ ಟೂರ್ನಿಯಲ್ಲಿ ದಾಖಲಾದ ಕೇವಲ 7ನೇ 1 ವಿಕೆಟ್‌ ಅಂತರದ ಗೆಲುವು ಎನಿಸಿದೆ. ಎಂಎ ಚಿದಬರಂ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 46.4 ಓವರ್‌ಗಳಲ್ಲಿ270 ರನ್‌ಗೆ ಆಲೌಟ್‌ ಆಯಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 47.2 ಓವರ್‌ಗಳಲ್ಲಿ9 ವಿಕೆಟ್‌ಗೆ 271 ರನ್ ಬಾರಿಸಿ ಗೆಲುವು ಕಂಡಿತು.

 

ಫ್ರೆಶ್ ನ್ಯೂಸ್

Latest Posts

Featured Videos