ಭಾರತದ ವಿರುದ್ಧದ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ

ಭಾರತದ ವಿರುದ್ಧದ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ

ಬೆಂಗಳೂರು: ಗೆಬ್ಬೆಗಾದ ಸೆಂಟ್ ಜಾರ್ಜ್​​ ಪಾರ್ಕ್​ನಲ್ಲಿ ನಡೆದ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ.

ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಟೀಂ ಇಂಡಿಯಾ 46.2 ಓವರ್‌ಗಳಲ್ಲಿ 211ಕ್ಕೆ ಸರ್ವಪತನ ಕಂಡಿತು. ಸುಲಭ ಗುರಿಯನ್ನು ಹರಿಣ ಪಡೆ 42.3 ಓವರ್‌ಗಳಲ್ಲಿ ಬೆನ್ನತ್ತಿ ಜಯ ತನ್ನದಾಗಿಸಿಕೊಂಡಿತು. ಟಾನಿ ಡೆ ಜೊರ್ಜಿ ಹಾಗೂ ರೀಜಾ ಹೆಂಡ್ರಿಕ್ಸ್ ಮೊದಲ ವಿಕೆಟ್‌ಗೆ ಸೇರಿಸಿದ 130 ರನ್ ದ.ಆಫ್ರಿಕಾದ ಗೆಲುವನ್ನು ಖಚಿತಪಡಿಸಿತು. ಹೆಂಡ್ರಿಕ್ 52ಕ್ಕೆ ನಿರ್ಗಮಿಸಿದರೂ, ಜೊರ್ಜಿ 122 ಎಸೆತಗಳಲ್ಲಿ ಔಟಾಗದೆ 119 ರನ್ ಕಲೆಹಾಕಿ ತಂಡವನ್ನು ಸರಣಿ ಸೋಲಿನಿಂದ ಪಾರು ಮಾಡಿದರು. ಭಾರತ 8 ಬೌಲರ್‌ಗಳನ್ನು ಪ್ರಯೋಗಿಸಿದರೂ, ದ. ಆಫ್ರಿಕಾದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos