ಸೌಂದರ್ಯ ಕಾಪಾಡಿಕೊಳ್ಳಬೇಕೆ?

ಸೌಂದರ್ಯ ಕಾಪಾಡಿಕೊಳ್ಳಬೇಕೆ?

ಜೂನ್.7, ನ್ಯೂಸ್ ಎಕ್ಸ್ ಪ್ರೆಸ್ : ವರ್ಷಗಟ್ಟಲೆ ನೀವು ಹಚ್ಚುವ ಕ್ರೀಮ್‌ಗಳು ಅಥವಾ, ನಿಮ್ಮ ಡಯಟ್ ಅಷ್ಟೇ ನಿಮ್ಮನ್ನು ಸುಂದರವಾಗಿಸುವುದಿಲ್ಲ. ನಿಮ್ಮ ಯೋಚನೆಗಳು, ಹವ್ಯಾಸಗಳು ಎಲ್ಲ ಸೇರಿ ವ್ಯಕ್ತಿತ್ವಕ್ಕೆ ಕಳೆ ತಂದುಕೊಟ್ಟಾಗಷ್ಟೇ ಆಕರ್ಷಕವೆನಿಸಲು ಸಾಧ್ಯ. ಒಳಗಿನಿಂದಲೂ, ಹೊರಗಿನಿಂದಲೂ ಸೌಂದರ್ಯ ಕಾಪಾಡಿಕೊಳ್ಳಲು ಬೇಕಾದ ಕೆಲವು ಸರಳ ಹವ್ಯಾಸಗಳು ಇಲ್ಲಿವೆ.

ವೈಯಕ್ತಿಕ ಬೆಳವಣಿಗೆ

ಆಕರ್ಷಕ ಮಹಿಳೆ ಎನಿಸಿಕೊಂಡವರು ಹೊಸ ವೈಯಕ್ತಿಕ ಗುರಿಗಳನ್ನು ಹಾಗೂ ಅವಕಾಶಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಹೊಸ ಹವ್ಯಾಸ ಅಥವಾ ಹೊಸ ಉದ್ಯೋಗ ಯಾವುದೇ ಇರಲಿ ಹುಡುಕಿಕೊಂಡು, ಅದರಿಂದ ಹಲವು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸುತ್ತಾರೆ.

ಪ್ರಾಮಾಣಿಕತೆ

ಪ್ರಾಮಾಣಿಕತೆ ಹಾಗೂ ನೇರ ನಡೆಯ ವ್ಯಕ್ತಿತ್ವ ಆಕರ್ಷಕ ಮಹಿಳೆಯ ಸಾಮಾನ್ಯ ಲಕ್ಷಣಗಳು. ಆಕೆ ಕುರಿಮಂದೆಯಲ್ಲಿ ಒಬ್ಬಳಾಗುವುದಕ್ಕಿಂತ, ಎಲ್ಲರ ನಾಯಕಿಯಾಗಿ ಇರಬಯಸುತ್ತಾಳೆ. ತಾನು ಏನಾಗಿದ್ದಾಳೋ ಅದನ್ನು ಜಗತ್ತಿಗೆ ತೋರಿಸಲು ಆಕೆಗೆ ಯಾವ ಅಂಜಿಕೆಯೂ ಇರುವುದಿಲ್ಲ.

ನಿಮಗೆ ಸಮಯ ಕೊಟ್ಟುಕೊಳ್ಳಿ

ಆಕರ್ಷಕವೆನಿಸಿಕೊಳ್ಳಲು ಮೊದಲು ನಿಮಗೆ ನೀವು ಸಮಯ ಕೊಟ್ಟುಕೊಳ್ಳಬೇಕು. ವ್ಯಾಯಾಮ, ಓದು ಅಥವಾ ನಿಮ್ಮ ಯಾವುದೇ ಹವ್ಯಾಸಗಳಿಗೆ ಸಮಯ ನೀಡಿ. ಕೆಲವೊಮ್ಮೆ ಇತರರಿಗಿಂತ ನಿಮ್ಮನ್ನೇ ಮೊದಲಿಟ್ಟು ಕೊಳ್ಳಬೇಕಾಗುತ್ತದೆ. ಒಮ್ಮೆ ನೀವು ನಿಮಗೆ ಮುಖ್ಯವಾದಲ್ಲಿ, ನಿಮ್ಮಲ್ಲಿ ಹೊಸತಾಗಿ ಉದಯವಾದ ಆತ್ಮವಿಶ್ವಾಸವನ್ನು ಜನರು ಗುರುತಿಸಲಾರಂಭಿಸುತ್ತಾರೆ. ನಿಮ್ಮನ್ನು ನೀವು ಚೆನ್ನಾಗಿ ಕಾಳಜಿ ವಹಿಸುತ್ತೀರಾದರೆ, ಇತರರ ಕಾಳಜಿಯನ್ನು ಕೂಡಾ ವಹಿಸಬಲ್ಲಿರಿ.

ಜವಾಬ್ದಾರಿ ತೆಗೆದುಕೊಳ್ಳುವುದು

ಆಕರ್ಷಕ ಮಹಿಳೆಯ ಅತ್ಯುತ್ತಮ ಗುಣವೆಂದರೆ ಜವಾಬ್ದಾರಿ ತೆಗೆದುಕೊಳ್ಳಲು ಕಲಿತುಕೊಳ್ಳುವುದು. ಸದಾ ದೂರುತ್ತಾ ಕೂರುವ ಬದಲು ಆಕರ್ಷಕ ಮಹಿಳೆ ಎನಿಸಿಕೊಳ್ಳುವವಳು ತನ್ನ ತಪ್ಪುಗಳನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳುತ್ತಾಳೆ, ತನ್ನ ಪರಿಸರ ಹಾಗೂ ಕೆಲಸಗಳನ್ನು ಅರಿತು ಹೆಚ್ಚಿನ ಜವಾಬ್ದಾರಿ ಹೊರುತ್ತಾಳೆ.

ವ್ಯಾಯಾಮ

ಅಂದವನ್ನು ನಿಭಾಯಿಸುವುದು ಮುಖ್ಯ. ವ್ಯಾಯಾಮವು ಈ ಅಂದವನ್ನು ಒಳಗಿನಿಂದ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದ ನೀವು ಹೆಚ್ಚು ಬಲ ಹಾಗೂ ಆರೋಗ್ಯ ಪಡೆಯುವುದಲ್ಲದೆ, ಆತ್ಮವಿಸ್ವಾಸ ಬೆಳೆಸಿಕೊಳ್ಳುವಿರಿ. ನೀವು ಎಕ್ಸರ್ಸೈಸ್‌ಗೆ ಹೊಸಬರಾಗಿದ್ದರೆ ಯಾವ ರೀತಿಯ ಫಿಟ್ನೆಸ್ ನಿಮಗೆ ವರ್ಕ್ ಆಗುತ್ತದೆ ಎಂಬುದನ್ನು ತಿಳಿದುಕೊಂಡು ಮುಂದುವರೆಯಿರಿ.

ಬುದ್ಧಿವಂತಿಕೆ

ಜಗತ್ತಿನ ಆಗುಹೋಗುಗಳ ಬಗ್ಗೆ ಅರಿವಿದ್ದು, ಅರ್ಥಪೂರ್ಣ ಸಂಭಾಷಣೆ ನಡೆಸುವ ಮಹಿಳೆ ಯಾರಿಗಾದರೂ ಆಕರ್ಷಕವೆನಿಸುತ್ತಾಳೆ. ಓದುವ ಅಭ್ಯಾಸವಿದ್ದರೆ, ಜ್ಞಾನವೂ ಹೆಚ್ಚುತ್ತದೆ, ಮಾತು ಆರಂಭಿಸಲೂ ಸುಲಭವಾಗುತ್ತದೆ. ಇದು ಇತರರಲ್ಲಿ ನೀವು ಹೊಸತನ್ನು ತಿಳಿದುಕೊಳ್ಳಲು ಉತ್ಸುಕರಿದ್ದೀರಿ ಎಂಬ ಸಂದೇಶ ರವಾನಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos