ಸೋಪಿನ ಪುಡಿ ಸೇರಿಸಿ ಹಾಲು ಮಾರಾಟ

ಸೋಪಿನ ಪುಡಿ ಸೇರಿಸಿ ಹಾಲು ಮಾರಾಟ

ಭೋಪಾಲ್, ಅ. 24 : ಮಧ್ಯಪ್ರದೇಶದ ಹಾಲಿನ ವ್ಯಾಪಾರಿಯೋರ್ವ ಕೆಮಿಕಲ್ ಹಾಗೂ ಸೋಪಿನ ಪುಡಿ ಸೇರಿಸಿ ಪ್ರತಿದಿನ ಬರೋಬ್ಬರಿ 15ರಿಂದ 20 ಸಾವಿರ ಲೀಟರ್ ಹಾಲನ್ನು ತಯಾರಿಸಿ, ಅದನ್ನು ತಾಜಾ ಹಾಲಿನ ಜೊತೆ ಸೇರಿಸಿ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.
ಹಾಲಿನ ಡೈರಿ ನಡೆಸುತ್ತಿದ್ದ ರಾಜು ಗುರ್ಜರ್ ಕಲಬೆರಕೆ ಹಾಲನ್ನು ಮಾರಾಟ ಮಾಡುತ್ತಿದ್ದನು. ಈ ಕೆಮಿಕಲ್ ಮಿಶ್ರಿತ ಹಾಲನ್ನು ತನ್ನ ಸುತ್ತಮುತ್ತಲ ಪ್ರದೇಶಕ್ಕೆ ಮಾರಾಟ ಮಾಡದೇ ದೂರದ ರಾಜಸ್ಥಾನದ ಕೋಟಾ ಪ್ರದೇಶದಲ್ಲಿ ಮಾರಾಟ ಮಾಡಿ ರಾಜು ಹಣ ಮಾಡುತ್ತಿದ್ದನು. ಆರೋಗ್ಯಕ್ಕೆ ಮಾರಕವಾದ ಕೆಮಿಕಲ್ಸ್, ತಾಳೆ ಎಣ್ಣೆ, ಸೋಪಿನ ಪುಡಿ ಹೀಗೆ ಹಲವು ಸಾಮಾಗ್ರಿಗಳನ್ನು ಬಳಸಿ ರಾಜು ಕೃತಕ ಹಾಲನ್ನು ತಯಾರಿಸುತ್ತಿದ್ದನು.

ಫ್ರೆಶ್ ನ್ಯೂಸ್

Latest Posts

Featured Videos