ಸಖತ್ ವೈರಲ್ ಆದ ಕಾನ್ಸ್ಟೇಬಲ್ ಹಾಡಿದ ಸಾಂಗ್

ಸಖತ್ ವೈರಲ್ ಆದ ಕಾನ್ಸ್ಟೇಬಲ್ ಹಾಡಿದ ಸಾಂಗ್

ಬೆಂಗಳೂರು, ಅ. 16: ಪೊಲೀಸರನ್ನ ಕಂಡರೆ ಭಯ ಬೀಳುವ ಮಂದಿ ಇರುತ್ತಾರೆಯೇ ಹೊರತು ಅವರ ಪ್ರತಿಭೆಯನ್ನು ಗುರುತಿಸುವವರು ಕಡಿಮೆ. ಅವರಲ್ಲಿಯೂ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ ಬರೀ ಪೊಲೀಸ್ ಕೆಲಸ ಮಾತ್ರವಲ್ಲ ಬೇರೆ ಸಮಾಜಮುಖಿ ಕೆಲಸ ಕೂಡ ಮಾಡಲು ಸೈ ಎನ್ನುವ ಪೊಲೀಸ್ ಸಿಬ್ಬಂದಿಯೂ ಇದ್ದಾರೆ. ಸಂಚಾರಿ ನಿಯಮ ಪಾಲಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಹೊರಟ ಬೆಂಗಳೂರಿನ ಶ್ವಾನದಳದ ಕಾನ್ಸ್ಟೇಬಲ್ ಮೌಲಾಲಿ ಕೆ ಆಲಗೂರ್ ಈಗ ಎಲ್ಲಡೆ ಫೇಮಸ್ ಆಗಿದ್ದಾರೆ. ಅವರು ಹಾಡಿದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕಾನ್ಸ್ಟೇಬಲ್ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬೆಂಗಳೂರಿನ ಶ್ವಾನದಳದ ಕಾನ್ಸ್ಟೇಬಲ್ ಒಬ್ಬರು ಸಂಚಾರಿ ನಿಯಮ ಪಾಲಿಸಿ ಎಂದು ಹಾಡಿರುವ ಹಾಡು ಎಲ್ಲರ ಮನ ಗೆದ್ದಿದೆ.  ಈ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಖತ್ ಸೌಂಡು ಮಾಡುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos