ಅಮೆರಿಕ: ಕಾಲ್ತುಳಿತ 35 ಸಾವು

ಅಮೆರಿಕ: ಕಾಲ್ತುಳಿತ 35 ಸಾವು

ಟೆಹ್ರಾನ್, ಜ. 07: ಅಮೆರಿಕದ ವೈಮಾನಿಕ ದಾಳಿಯಲ್ಲಿ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 35ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಇರಾನ್ ಸ್ವಾಮ್ಯದ ಟೆಲಿವಿಷನ್ ವರದಿ ಬಿತ್ತರಿಸಿದೆ.

ಖಾಸಿಂ ಪಾರ್ಥಿವ ಶರೀರದ ಅಂತಿಮ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಈ ವೇಳೆ ಸಂಭವಿಸಿದ ನೂಕುನುಗ್ಗಲು, ಕಾಲ್ತುಳಿತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ಇರಾನ್ ತುರ್ತು ಸೇವೆಯ ಮುಖ್ಯಸ್ಥ ಪಿರೋಸ್ಸೈನ್ ಕೂಲಿವಂಡ್ ನ್ಯೂಸ್ ಚಾನೆಲ್ ಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಸೋಮವಾರ ನಡೆದ ಮೆರವಣಿಗೆಯಲ್ಲಿ ಒಂದು ಮಿಲಿಯನ್ ಗೂ ಅಧಿಕ ಇರಾನ್ ಜನರು ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದುರದೃಷ್ಟಕರ. ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ಪಿರೋಸ್ಸೈನ್ ತಿಳಿಸಿದ್ದಾರೆ

 

ಫ್ರೆಶ್ ನ್ಯೂಸ್

Latest Posts

Featured Videos