ಉಗ್ರರ ದಾಳಿಗೆ ಹುತಾತ್ಮನಾದ ಯೋಧ

ಉಗ್ರರ ದಾಳಿಗೆ ಹುತಾತ್ಮನಾದ ಯೋಧ

ಬೆಂಗಳೂರು: 66RR ಬೆಟಾಲಿಯನ್ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ಹುತಾತ್ಮ ಯೋಧ ಉಗ್ರರ ವಿರುದ್ಧದ ಕಾದಾಟದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದಿದ್ದ ಗುಂಡಿನ ಭಾರಿ ಚಕಮಕಿಯಲ್ಲಿ ಉಗ್ರರ ಗುಂಡೇಟಿಗೆ ಎದೆಯೊಡ್ಡಿದ್ದ ಯೋಧ ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದಿದ್ದ ಕಾದಾಟದಲ್ಲಿ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಮೂಲತ ಮೈಸೂರುನಿವಾಸಿಯಾಗಿದ್ದ ಯೋಧ. ಮಗನ ಸಾವಿನ ಹಿನ್ನೆಲೆ ಮನೆಯಲ್ಲಿ ನೀರವ ಮೌನ ಪ್ರಾಂಜಲ್ ಪೋಷಕರನ್ನು ಸಂತೈಸಲು ಆಗಮಿಸುತ್ತಿರುವ ಸಂಬಂಧಿಗಳು. ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಕಳೆದ ಆರು ತಿಂಗಳ ಹಿಂದೆ ಮನೆಗೆ ಆಗಮಿಸಿದ್ದ ಪ್ರಾಂಜಲ್ ಮನೆಯಲ್ಲಿ ಹಮ್ಮಿಕೊಂಡಿದ್ದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಒಂದು ವಾರ ಪೋಷಕರ ಜೊತೆ ಇದ್ದು ಕರ್ತವ್ಯಕ್ಕೆ ಮರಳಿದ್ದ ಪ್ರಾಂಜಲ್ ಎರಡು ವರ್ಷದ ಹಿಂದೆ ಪ್ರಾಂಜಲ್ ಕಾಶ್ಮೀರಕ್ಕೆ ತೆರಳಿದ್ದರು. ಬೆಂಗಳೂರಿನ ಅದಿತಿ ಎಂಬುವವರ ಜೊತೆ ವಿವಾಹವಾಗಿದೆ.ವಿವಾಹ ನಂತರ ಮರಳಿ ಕರ್ತವ್ಯಕ್ಕೆ ತೆರೆಳಿದ್ದ ಯೋಧ. ಉಗ್ರರ ಜೊತೆ ಹೋರಾಡಿ ಕ್ಯಾಪ್ಟನ್ ಎಂ.ವಿ ಪ್ರಾಂಜಲ್(29)ಹುತಾತ್ಮ ಮಂಗಳೂರಿನ ಎಂಆರ್ ಪಿಎಲ್ ನ ನಿವೃತ್ತ ಆಡಳಿತ ನಿರ್ದೇಶಕ ಎಂ ವೆಂಕಟೇಶ್ ಅವರ ಏಕೈಕ ಪುತ್ರ. ಸದ್ಯ ಬುಕ್ಕಸಾಗರದ ನಂದನವನ ಬಡಾವಣೆಯಲ್ಲಿ ನೆಲೆಸಿರುವ ವೆಂಕಟೇಶ್ ಕುಟುಂಬ.. ವೆಂಕಟೇಶ್ ಮನೆ ಬಳಿ ಆಗಮಿಸುತ್ತಿರುವ ಆಪ್ತರು ಹಾಗೂ ಕುಟುಂಬಸ್ಥರು. ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನಕ್ಕೆ ಜಿಗಣಿಯ ನಂದನವನ ಬಡಾವಣೆ ಮನೆಯ ಸಮೀಪ ಸಿದ್ದತೆ. ನಾಳೆ ಬೆಳಿಗ್ಗೆ ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ ಶರೀರ ಆಗಮಿಸುವ ಸಾಧ್ಯತೆಯಿದೆ. ಮನೆಯ ಮುಂಭಾಗವಿದ್ದ ಖಾಲಿ ಜಾಗವನ್ನ ಸ್ವಚ್ಚತೆ ಮಾಡಿಸುತ್ತಿರುವ ಕುಟುಂಬಸ್ಥರು Mrpl ಬೆಂಗಳೂರು ಉಸ್ತುವಾರಿ ಸುದರ್ಶನ್ ರ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ಸಿದ್ದತೆ ಮಾಡಲಾಗಿದೆ. ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos