ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ಜಾಲ ತಾಣ ಕಾರ್ಯಕರ್ತರ ಸಭೆ

ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ಜಾಲ ತಾಣ ಕಾರ್ಯಕರ್ತರ ಸಭೆ

ಹೊಸಕೋಟೆ, ಸೆ. 18: ಹೊಸಕೋಟೆ ತಾಲ್ಲೂಕಿನಲ್ಲಿ ಇದೇ 21-9-2019 ರಂದು ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿ ಸಮಾವೇಶ ಮತ್ತು ಬೃಹತ್ ಪ್ರತಿಭಟನೆ ಮೇರವಣಿಗೆಯನ್ನು ಹೊಸಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದು, ಅದರ ಪ್ರಯುಕ್ತ ಹೊಸಕೋಟೆ ಹೊರವಲಯ ವಿಷ್ಣುಭವನ ಹೋಟೆಲ್ ನಲ್ಲಿ ಬೆಂಗಳೂರು ಗ್ರಾಮಾತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ ಮತ್ತು ಪ್ರಸಾದ್ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುನಿಶಮಣ್ಣ, ಕಾಂಗ್ರೆಸ್ ಪಕ್ಷದಿಂದ ರಾತ್ರೋ ರಾತ್ರಿ ನಮ್ಮ ಕಾಂಗ್ರೆಸ್ ಪಕ್ಷದಿಂದ ಗೆದ್ದು ಮಂತ್ರಿಗಳಾಗಿದ್ದ ಎಂಟಿಬಿ ನಾಗರಾಜಣ್ಣನವರು ಶಾಸಕ ಸ್ಥಾನ ಮಂತ್ರಿಗೆ ಎರಡಕ್ಕೂ ರಾಜಿನಾಮೇ ನೀಡಿ ಬಿಜೆಪಿಯಲ್ಲಿ ಗುರ್ತಿಸಿಕೊಂಡಿದ್ದರಿಂದ ಎಐಸಿಸಿ ರಾಹುಲ್ ಗಾಂಧಿ ಇತರೆ 14 ಜನ ಶಾಸಕರಗಳನ್ನು ಸೇರಿ ಪಕ್ಷದಿಂದ ಉಚ್ಚಾಟನೆ ಮಾಡಿದರು.

ನಾವು ಸಹ ಪತ್ರಿಕಾ ಹೇಳಿಕೆಗಳನ್ನು ನೀಡಿ ಈಗಲಾದ್ರು ಬನ್ನಿ ಎಂದು ಸುದ್ದಿಗಳನ್ನು ಮಾಡಿದರು ಅವರು ಅಷ್ಟೊತ್ತಿಗಾಗಲೆ ಬಹಳ ದೂರ ಹೋಗಿದ್ದರು. ನಂತರ ಮಾನ್ಯ ಸ್ವೀಕರ್ ರಮೇಶ್ ಕುಮಾರ್ ಇವರನ್ನು ಅನರ್ಹಗೊಳಿಸಿದರು. ಅದರ ಸಂಬಂದ ಇದೇ 21ನೇ ತಾರೀಕು ಹೊಸಕೋಟೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಅನರ್ಹ ಶಾಸಕರು ಮತ್ತು ರಾಜ್ಯ ಮತ್ತು ಕೇಂದ್ರದ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು.

ಸೋಶಿಯಲ್ ಮಿಡಿಯಾ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು. ನಂತರ ಮಾತನಾಡಿ ಬೆ.ಗ್ರಾ.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪ್ರಸಾದ್ ಮಾತನಾಡಿಹಿಂದೆ 2004 ರಲ್ಲಿ ನಾಗರಾಜಣ್ಣ ಹೊಸಕೋಟೆಗೆ ಚುನಾವಣೆಗೆ ಬಂದಾಗ ಯಾರಾನ್ನಾದ್ರು ಗುರುಡಾಚಾರ್ ಪಾಳ್ಯದಿಂದ ಕರೆದುಕೊಂಡು ಬಂದು ಪಕ್ಷವನ್ನು ಕಟ್ಟಿದ್ದರಾ ಇಲ್ಲಾ ತಾನೇ, ನಮ್ಮ ಕಾರ್ಯಕರ್ತರ ಶ್ರಮದಿಂದ ನೀವು ಮೂರು ಭಾರಿ ಮಂತ್ರಿಯಾಗಿದ್ದನ್ನು ಮರೆಯಬಾರದು.

ಆಮೇಲೆ ನೀಮಗೆ ಶಾಸಕ ಸ್ಥಾನ, ಮಂತ್ರಿ ಸ್ಥಾನ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಿಕ್ಕಿದ್ದು. ಹಿಂದಿನ ಬಿಜೆಪಿಯವರ ದುರಾಳಿತದಿಂದ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಅದು ನೀಮ್ಮಿಂದಲ್ಲ ಕಾರ್ಯಕರ್ತರ ಶ್ರಮದಿಂದ ಸಿದ್ದರಾಮಯ್ಯನವರು ನೀಡಿದ ಅನುದಾನಗಳ ಪೂಜೆಗಳ ಗುದ್ದಲಿ ಪೂಜೆಯನ್ನು ಈಗಲೂ ಮಾಡುತ್ತಿರುವುದು. ಕೆ.ಸಿ ವಾಲಿ ಮಾನ್ಯ ಕೃಷ್ಣಬೈರೇಗೌಡರ ಸಹಕಾರದಿಂದ ಹೊಸಕೋಟೆಯಲ್ಲಿ ಬಿಕಿದ್ದ ನೀರನ್ನು ತಾವರೆಕೆರೆ ಭಾಗದಲ್ಲಿ ಬಿಟ್ಟರೆ ಕನಿಷ್ಠ 8 ಕೆರೆಗನ್ನಾದರು ತುಂಬಿಸಬಹುದು ಎಂದು ಕೃಷ್ಣಬೈರೇಗೌಡರು ನೀರು ಬಿಟ್ಟಿದ್ದು, ಸಮಯಕ್ಕೆ ತಕ್ಕಂತೆ ನಾಟಕ ಆಡುವಲ್ಲಿ ಮಾಜಿ ಸಚಿವರು ಎಂದು ಲೇವಡಿ ಮಾಡಿದರು. ಕಾರ್ಯಕ್ರಮದಲ್ಲಿ ಲಕ್ಕೊಂಡಹಳ್ಳಿ ಮಂಜುನಾಥ್, ನಾರಾಯಣಗೌಡ, ನಾಣಿ,ಶಿವಕುಮಾರ್, ಟಿ.ಪಿ ಸದಸ್ಯರಾದ ಬೀರಣ್ಣ, ಬೈಲನರಸಾಪುರ ಸಗೀರ್, ಮುಕಿಯಾರ್, ಜಿನ್ನಾಗರ ನಾಗರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ, ಆರ್, ಮಂಜುನಾಥ್, ಸೋಶಿಯಲ್ ಮಿಡಿಯಾ ಸೋಣ‍್ಣೇಗೌಡ, ಭರತ್, ಇತರರ ಭಾಗವಹಿಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos