ಸ್ನೇಹಿತರಿಗೆ ಗಂಗೂಲಿ ಭರ್ಜರಿ ಪಾರ್ಟಿ

ಸ್ನೇಹಿತರಿಗೆ ಗಂಗೂಲಿ ಭರ್ಜರಿ ಪಾರ್ಟಿ

ಮುಂಬೈ, ಅ.19 : ಟೀ ಇಂಡಿಯಾ ಮಾಜಿ ಕ್ಯಾಪ್ತನ್ ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ಸ್ನೇಹಿತರಿಗೆ ಭರ್ಜರಿ ಔತಣಕೂಟ ಏರ್ಪಡಿಸಿದ್ದಾರೆ.
ಬಿಸಿಸಿಐ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ಹಿನ್ನಲೆ ಮಾಜಿ ನಾಯಕ ಸೌರವ್ ಗಂಗೂಲಿ ಅಧ್ಯಕ್ಷರಾಗುತ್ತಿರುವುದಕ್ಕೆ ಅವರ ನಾಯಕತ್ವದಲ್ಲಿ ಆಡಿದ, ಸ್ನೇಹಿತ ಕ್ರಿಕೆಟಿಗರು ಮನಃಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದರು. ಇದೀಗ ಗಂಗೂಲಿ ತಮ್ಮ ಸ್ನೇಹಿತರಿಗಾಗಿ ಪಾರ್ಟಿ ಕೊಡಿಸ್ತಿದ್ದಾರೆ.

ಅಕ್ಟೋಬರ್ 25 ರಂದು ತಮ್ಮ ನಿವಾಸದಲ್ಲಿ ಮಾಜಿ ಕ್ರಿಕೆಟಿಗರಿಗಾಗಿ ಔತಣಕೂಟ ನೀಡುತ್ತಿದ್ದಾರೆ. ಇದರಲ್ಲಿ ಮಾಜಿ ನಾಯಕ ಅಜರುದ್ದೀನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಕ್ರಿಕೆಟಿಗರು, ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos