ಹೊಸ ದಾಖಲೆ ಬರೆದ ಸ್ನೇಕ್ ಶ್ಯಾಮ್

ಹೊಸ ದಾಖಲೆ ಬರೆದ ಸ್ನೇಕ್ ಶ್ಯಾಮ್

ಮೈಸೂರು, ಅ. 15: ಮೈಸೂರಿನವರಾದ ಸ್ನೇಕ್ ಶ್ಯಾಮ್ ಕಳೆದ 40 ವರ್ಷಗಳಿಂದಲೂ ಹಾವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ಧಾರೆ. ಮೈಸೂರಿನಲ್ಲಿ ಎಲ್ಲೇ ಹಾವು ಕಂಡರೂ ಮೊದಲ ನೆನಪಾಗುವುದೆ  ಸ್ನೇಕ್ ಶ್ಯಾಮ್. ಅವರು 80 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದಾರೆ.

ಯಾರಿಗಾದರೂ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದಾಗ ಅದು ಯಾವ ಹಾವು ಕಚ್ಚಿದ್ದೆಂದು ಮಾಹಿತಿ ಪಡೆಯಲು ಕೆಲವೊಮ್ಮೆ ವೈದ್ಯರು  ಕೂಡ ಶ್ಯಾಮ್ ಸಹಾಯಕ್ಕೆ ಮೊರೆ ಹೋಗುತ್ತಾರೆ.

ಸ್ನೇಕ್ ಶ್ಯಾಮ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿಯೂ ಖ್ಯಾತಿ ಪಡೆದಿದ್ದಾರೆ. ನ್ಯಾಷನಲ್ ಜಿಯೋಗ್ರಾಪಿಕ್ ಚಾನೆಲ್ ನ ಕಾರ್ಯಕ್ರಮವೊಂದರಲ್ಲೂ ಇವರು ಕಾಣಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos