ಹಾವನ್ನು ಕೈನಲ್ಲಿ ಹಿಡಿದು ಆಟವಾಡಿದ್ರು ಪ್ರಿಯಾಂಕಾ ಗಾಂಧಿ!

ಹಾವನ್ನು ಕೈನಲ್ಲಿ ಹಿಡಿದು ಆಟವಾಡಿದ್ರು ಪ್ರಿಯಾಂಕಾ ಗಾಂಧಿ!

ರಾಯ್ ಬರೇಲಿ, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣೆ ವೇಳೆ ರಾಜಕೀಯ ನಾಯಕರ ಬೇರೆ ಬೇರೆ ಬಣ್ಣಗಳನ್ನು ನೋಡಬಹುದು. ಕೆಲವರು ಭಾಷಣದ ಮೂಲಕ ಗಮನ ಸೆಳೆದ್ರೆ ಮತ್ತೆ ಕೆಲವರು ಮತದಾನದ ವೇಳೆ ಜನರ ಜೊತೆ ನಡೆದುಕೊಳ್ಳುವ ರೀತಿ ಸುದ್ದಿಯಾಗುತ್ತದೆ. ಈಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾವಿನೊಂದಿಗೆ ಆಟವಾಡಿದ ವಿಡಿಯೋ ವೈರಲ್ ಆಗಿದೆ. ಪ್ರಿಯಾಂಕಾ ಗಾಂಧಿ, ತಾಯಿ ಸೋನಿಯಾ ಗಾಂಧಿ ಲೋಕಸಭಾ ಕ್ಷೇತ್ರ ರಾಯ್ ಬರೇಲಿಯಲ್ಲಿ ಪ್ರಚಾರ ನಡೆಸಿದ್ರು. ಈ ವೇಳೆ ಹಾವಾಡಿಗರನ್ನು ಭೇಟಿಯಾಗಿದ್ದಾರೆ. ಹಾವಾಡಿಗರ ಮುಂದೆ ಕುಳಿತು ಹಾವಿನ ಬಗ್ಗೆ ಮಾಹಿತಿ ಪಡೆದ ಪ್ರಿಯಾಂಕಾ, ಮಾತಿನ ಮಧ್ಯೆ ಅನೇಕ ಬಾರಿ ಹಾವನ್ನು ಕೈನಲ್ಲಿ ಹಿಡಿದಿದ್ದಾರೆ. ಯಾವುದೇ ಭಯವಿಲ್ಲದೆ ಹಾವನ್ನು ಕೈನಲ್ಲಿ ಹಿಡಿದಿದ್ದ ಪ್ರಿಯಾಂಕಾ ಧೈರ್ಯಕ್ಕೆ ಅಲ್ಲಿ ನೆರೆದಿದ್ದ ಜನರು ಬೆರಗಾಗಿದ್ದಾರೆ. ಈ ಹಿಂದೆ ಮಕ್ಕಳ ಜೊತೆ ಪ್ರಿಯಾಂಕಾ ಕಾಣಿಸಿಕೊಂಡಿದ್ದರು. ಮಕ್ಕಳ ಬಟ್ಟೆ ಬಟನ್ ಸರಿ ಮಾಡಿಯೂ ಎಲ್ಲರ ಗಮನ ಸೆಳೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos