ಹಾವು, ಮುಂಗುಸಿ ಸೆಣಸಾಟ

ಹಾವು, ಮುಂಗುಸಿ ಸೆಣಸಾಟ

ಬೆಂಗಳೂರು, ನ.5 : ಪ್ರಚೋದನೆಗೊಂಡ ಹಾವು ಮುಂಗುಸಿಯನ್ನು ಸಾಯಿಸಿ ಆಹಾರವನ್ನಾಗಿಸಿಕೊಳ್ಳುವ ಸಲುವಾಗಿ ಕಾದಾಟಕ್ಕೆ ಇಳಿಯುತ್ತದೆ. ಆದರೆ, ಮುಂಗುಸಿಗಳು ಹಾವಿಗಿಂತಲೂ ಚುರುಕು. ವೇಗವಾಗಿ ಸರಿದಾಡಿ ಹಾವಿನ ಹೊಡೆತದಿಂದ ತಪ್ಪಿಸಿಕೊಳ್ಳುತ್ತದೆ. ಪದೇ ಪದೇ ವಿಷದ ಹೆಡೆಯನ್ನು ನೆಲಕ್ಕೆ ಬಡಿದುಕೊಂಡು ಸುಸ್ತಾದ ಹಾವಿನ ಮೇಲೆರಗುವ ಮುಂಗುಸಿ ಒಂದೇ ಏಟಿಗೆ ಅದರ ತಲೆಯನ್ನು ಛಿದ್ರಗೊಳಿಸಿಸುತ್ತದೆ!
ಮುಂಗುಸಿ ಸಾಯದಿರಲು ಮತ್ತೊಂದು ಅಂಶವೂ ಕಾರಣ.

ಅದೆಂದರೆ, ಮುಂಗುಸಿಗಳು ಸಹ ಹಾವುಗಳಲ್ಲಿರುವಂತೆಯೇ ರಾಸಾಯನಿಕ ಗ್ರಂಥಿಗಳನ್ನು ಹೊಂದಿವೆ. ಅಲ್ಲದೆ ಮೈಮೇಲಿನ ಚರ್ಮ ದಪ್ಪವಾಗಿರುವ ಕಾರಣ ಹಾವಿನ ಕಡಿತ ಇವುಗಳಿಗೆ ತಾಗುವುದಿಲ್ಲ. ಇದರಿಂದಾಗಿ ಹಾನಿನ ನರಘಾತುಕ ವಿಷ ಮುಂಗುಸಿಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ, ಕೆಲವೊಮ್ಮೆ ಹಾವಿನಿಂದ ಹೊಡೆತ ತಿಂದು ಮುಂಗುಸಿಗಳೇ ಸಾವನ್ನಪ್ಪಿದ ಉದಾಹರಣೆಗಳೂ ಉಂಟು.
ಮುಂಗುಸಿ ಮಾಂಸಾಹಾರ ಮತ್ತು ಸಸ್ಯಾಹಾರ ಎರಡೂನ್ನೂ ತಿನ್ನುತ್ತದೆ. ಹಕ್ಕಿಗಳ ಮೊಟ್ಟೆಗಳನ್ನು ಒಡೆದು ಅದರಲ್ಲಿನ ಮಾಂಸವನ್ನು ತಿನ್ನುವುದಕ್ಕೂ ಮುಂಗುಸಿ ಹೆಸರುವಾಸಿ. ಅಲ್ಲದೆ ಹಕ್ಕಿ, ಇಲಿ, ಕೀಟಗಳು, ಕಪ್ಪೆ ಮತ್ತು ಹುಳುಗಳನ್ನು ಇದರ ಮೆಚ್ಚಿನ ಆಹಾರ. ಅಲ್ಲದೆ ಹಣ್ಣು ಮತ್ತುಹಣ್ಣಿನ ಬೀಜಗಳನ್ನು ತಿನ್ನುತ್ತದೆ. ವಿಚಿತ್ರವೆಂದರೆ ಹಾವುಗಳನ್ನು ಸಾಯಿಸಿದರೂ ಅದನ್ನು ತಿನ್ನುವುದರಲ್ಲಿ ಮುಂಗುಸಿಗೆ ಆಸಕ್ತಿ ಕಡಿಮೆ. ಚೂರು ಪಾರುತಿಂದು ಹಾಗೇಯೇ ಬಿಡುತ್ತದೆ!

ಫ್ರೆಶ್ ನ್ಯೂಸ್

Latest Posts

Featured Videos