ಮಾರುಕಟ್ಟೆಗೆ ಬರಲಿವೆ ಸಿಮ್ ಸ್ಲಾಟ್ ಇಲ್ಲದ ಸ್ಮಾರ್ಟ್ಫೋನ್

ಮಾರುಕಟ್ಟೆಗೆ ಬರಲಿವೆ ಸಿಮ್ ಸ್ಲಾಟ್ ಇಲ್ಲದ ಸ್ಮಾರ್ಟ್ಫೋನ್

ಚೀನಾದ ಸ್ಮಾರ್ಟ್ಫೋನ್ ನಿರ್ಮಾಣ ಕಂಪನಿ Meizu ತನ್ನ ದೇಶಿ ಮಾರುಕಟ್ಟೆಗೆ Meizu
Zero ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.

ಈ ಸ್ಮಾರ್ಟ್ಫೋನ್ ಗೆ ಚಾರ್ಜ್ ಮಾಡಲು ಯಾವುದೇ ಜಾಗವಿಲ್ಲವಂತೆ. ಇಷ್ಟೇ ಅಲ್ಲ ಹೆಡ್ಫೋನ್ ಹಾಕಲು ಹಾಗೂ ಸಿಮ್ ಹಾಕಲು ಕೂಡ ವ್ಯವಸ್ಥೆ ಇಲ್ವಂತೆ. ಸರಳವಾಗಿ ಹೇಳುವುದಾದ್ರೆ ಈ ಸ್ಮಾರ್ಟ್ಫೋನ್ ಗೆ ಯಾವುದೇ ರಂಧ್ರವಿಲ್ಲವಂತೆ.

ಚೀನಾ ಸ್ಮಾರ್ಟ್ಫೋನ್ ಕಂಪನಿಗಳು ಆರಂಭದಿಂದಲೂ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿವೆ. Meizu
ಕೂಡ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಈ ಮೂಲಕ ಚೀನಾ ಕಂಪನಿಗಳು ತಂತ್ರಜ್ಞಾನದಲ್ಲಿ ಮುಂದಿವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

ಫೋನ್ ಗೆ ಚಾರ್ಜ್ ಹಾಕಲು ಯಾವುದೇ ವ್ಯವಸ್ಥೆಯಿಲ್ಲ. ಧ್ವನಿ ಹೆಚ್ಚು ಮಾಡಲು ಬಟನ್ ಇಲ್ಲ. ಸಿಮ್ ಹಾಕಲು ಜಾಗವಿಲ್ಲವೆಂದ್ರೆ ಫೋನ್ ಹೇಗೆ ಕೆಲಸ ಮಾಡುತ್ತೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಈ ಫೋನ್ ಗೆ ಟಚ್ ಪ್ಯಾನಲ್ ನೀಡಲಾಗಿದೆ. ಇದ್ರ ಸಹಾಯದಿಂದ ಧ್ವನಿ ಹೆಚ್ಚಿಸಬಹುದು. ಇನ್ನು ಸಿಮ್ ವಿಷ್ಯಕ್ಕೆ ಬರುವುದಾದ್ರೆ ಫೋನ್ ಇಸಿಐಎಂ ಬೆಂಬಲಿಸುತ್ತದೆ.

ಫೋನ್ಗೆ
5.99 ಇಂಚಿನ ಫುಲ್ ಹೆಚ್ಡಿ + ಸೂಪರ್
AMOLED ಪ್ರದರ್ಶನ ನೀಡಲಾಗಿದೆ.
12 ಮೆಗಾಪಿಕ್ಸಲ್ ಹಾಗೂ 20
ಮೆಗಾಪಿಕ್ಸಲ್ ಎರಡು ಕ್ಯಾಮರಾ ನೀಡಲಾಗಿದೆ. ಸೆಲ್ಫಿಗಾಗಿ 20
ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ಚೀನಾದಲ್ಲಿ ಈ ಮೊಬೈಲ್ ಬೆಲೆ ಎಷ್ಟು? ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos