ರಷ್ಯಾದಲ್ಲಿ ಕಪಾಳಕ್ಕೆ ಹೊಡೆದುಕೊಳ್ಳುವ ವಿಚಿತ್ರ ಸ್ಪರ್ಧೆ!

ರಷ್ಯಾದಲ್ಲಿ ಕಪಾಳಕ್ಕೆ ಹೊಡೆದುಕೊಳ್ಳುವ ವಿಚಿತ್ರ ಸ್ಪರ್ಧೆ!

ಮಾಸ್ಕೋ, ಏ. 20, ನ್ಯೂಸ್ ಎಕ್ಸ್ ಪ್ರೆಸ್:: ಮನುಷ್ಯ ತನ್ನ ಶಕ್ತಿಯ ಪ್ರದರ್ಶನಕ್ಕೆ ಏನೆಲ್ಲ ಕಸರತ್ತು ಮಾಡುತ್ತಾನೆ. ಅನಾದಿ ಕಾಲದಿಂದಲೂ ಇದಕ್ಕೋಸ್ಕರ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುತ್ತಾರೆ. ಆದರೆ ಎಷ್ಟೇ ಸ್ಪರ್ಧೆ ಇರಲಿ ಒಂದಿಲ್ಲೊಂದು ರೀತಿಯಲ್ಲಿ ಹೊಸದೊಂದು ಸ್ಪರ್ಧೆಗಳನ್ನು ಕಂಡು ಹಿಡಿದುಬಿಡುತ್ತಾರೆ. ಇದೀಗ ತಮ್ಮ ತಾಕತ್ತನ್ನು ತೋರಿಸಲು ರಷ್ಯನ್ನರು ಹೊಸತೊಂದು ಪುರುಷರ ಕಪಾಳಮೋಕ್ಷ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಈ ಸ್ಪರ್ಧೆಯಲ್ಲಿ ನಡೆಯುವುದೇನೆಂದರೆ ಸ್ಪರ್ಧಿಗಳು ಸರತಿಯಾಗಿ ಒಬ್ಬರ ಕಪಾಳಕ್ಕೆ ಇನ್ನೊಬ್ಬರು ಜೋರಾಗಿ ಹೊಡೆಯಬೇಕು. ಇದರಲ್ಲಿ ಮೊದಲು ಯಾರು ಬೀಳುತ್ತಾರೋ ಇಲ್ಲವೇ ಶರಣಾಗುತ್ತಾರೋ ಅವರು ಸೋತಂತೆ. ಈ ಸ್ಪರ್ಧೆ ನಡೆದ ವಿಡಿಯೋ ಇದೀಗ ಟ್ವಿಟರ್‌ ನಲ್ಲಿ ವೈರಲ್ ಆಗಿದ್ದು ಸುಮಾರು 12,000 ರೀಟ್ವೀಟ್‌ಗಳನ್ನು ಪಡೆದಿದೆ. ಇದರಲ್ಲಿ ಪ್ರತಿಸ್ಪರ್ಧಿಗಳು ಒಬ್ಬರನ್ನೊಬ್ಬರನ್ನು ಹೊಡೆದುಕೊಳ್ಳುವುದನ್ನು ನೋಡಬಹುದು. ಈ ಸ್ಪರ್ಧೆಯನ್ನು ವ್ಯಾಸಿಲಿ ಕಾಮೊಟ್ಸಕಿ ಗೆದ್ದಿದ್ದು 30,000 ರಷ್ಯಾದ ರುಬಲ್ಸ್(32,000 ರೂಪಾಯಿ)ನ್ನು ಗೆದ್ದಿದ್ದಾರಂತೆ. ಇನ್ನು ಎಂತೆಂತಹ ಸ್ಪರ್ಧೆಗಳು ಬರುತ್ತವೆಯೋ ಕಾಲವೇ ಉತ್ತರಿಸಬೇಕು.

ಫ್ರೆಶ್ ನ್ಯೂಸ್

Latest Posts

Featured Videos