ತಂಡಿಗಾಲದಲ್ಲಿ ಚರ್ಮದ ರಕ್ಷಣೆ

ತಂಡಿಗಾಲದಲ್ಲಿ ಚರ್ಮದ ರಕ್ಷಣೆ

ಬೆಂಗಳೂರು, ಡಿ. 03: ಸಾಮಾನ್ಯವಾಗಿ ಚಳಿಗಾಲ ಪ್ರಾರಂಭವಾಗುತ್ತಲೇ ಬಿರುಸಿನ ಗಾಳಿ ಮೈ ಕೈ ಚರ್ಮದ ಒಡಕಿಗೆ ಕಾರಣವಾಗುತ್ತದೆ. ಇಂತಹ ಸಮಯದಲ್ಲಿ ಚರ್ಮದ ರಕ್ಷಣೆಯತ್ತ ಗಮನ ಹರಿಸುವುದು ಅಗತ್ಯ. ನಮ್ಮ ಚರ್ಮವನ್ನು ರಕ್ಷಿಸುವ ಪದರ – ಸ್ಕಿನ್ ಬ್ಯಾರಿಯರ್ ಒಂದಿರುತ್ತದೆ. ಅದು ಪ್ರೋಟೀನ್ ಮತ್ತು ಕೊಬ್ಬಿನಾಂಶದಿಂದ ಮಾಡಲ್ಪಟ್ಟಿರುತ್ತದೆ. ಇದು ದುರ್ಬಲವಾಗಿದ್ದಲ್ಲಿ ತುರಿಕೆ, ಉರಿಯೂತ, ಎಕ್ಜೀಮಾದಂತಹ ಲಕ್ಷಣಗಳು ಕಾಣಿಸಿಕೊಂಡು ಬೇಗನೆ ಒಣತ್ವಚೆಯಾಗುತ್ತದೆ.

ನೀರಿನಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಚರ್ಮಕ್ಕೆ ತಕ್ಕ ಮಾಶ್ಚರೈಸರ್ಸ್ ಬಳಸಬಹುದು. ದೇಹಕ್ಕೆ ಒಳ್ಳೆಯ ಕೊಬ್ಬಿನಾಂಶ ಒದಗಿಸುವ ಆಹಾರಪದಾರ್ಥಗಳನ್ನು ಸೇವಿಸುವುದು ಅಗತ್ಯ.

ವಿಟಮಿನ್ ಸಿ ಹೆಚ್ಚಿರುವ ಪೇರಲೆ (ಸೀಬೆ), ಕಿತ್ತಳೆ, ಮೂಸಂಬಿ, ನೆಲ್ಲಿ, ನಿಂಬೆಹಣ್ಣಿನಂಥ ಆಹಾರಪದಾರ್ಥಗಳು, ವಿಟಮಿನ್ ಸಿ ಹೆಚ್ಚಿರುವ ಬ್ರೊಕೋಲಿ, ಪಾಲಕ್, ಕ್ಯಾಪ್ಸಿಕಂ ಹಾಗೂ ಇನ್ನಿತರ ಹಸಿರು ತರಕಾರಿಗಳನ್ನು ಸೇವಿಸುವುದು ಅವಶ್ಯ. ಇವು ಚರ್ಮದ ಆರೋಗ್ಯಕ್ಕೆ ಪೋಷಣೆ ನೀಡಿ, ಹೊಸ ಕೋಶಗಳ ರಚನೆಗೆ ಸಹಕರಿಸುತ್ತವೆ.

ಪ್ರತಿನಿತ್ಯ ಒಂದು ಗಂಟೆ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತಸಂಚಾರ ಹೆಚ್ಚಾಗುತ್ತದೆ. ಇದರಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳು, ಆಮ್ಲಜನಕ ದೊರಕಿ ಕೊಲ್ಲಾಜನ್ ಉತ್ಪತ್ತಿಗೆ ಸಹಾಯವಾಗುತ್ತದೆ. ಕನಿಷ್ಟ 6-7 ಗಂಟೆ ಚೆನ್ನಾಗಿ ನಿದ್ರೆ ಮಾಡಬೇಕು.

ಚಳಿಗಾಲದಲ್ಲಿ ಉಂಟಾಗುವ ಎಲ್ಲ ರೀತಿಯ ಸಮಸ್ಯೆಗಳನ್ನು ಹತೋಟಿ ಮಾಡಲು ಸ್ನಾನದ ಪೂರ್ವದಲ್ಲಿ ವರ್ಜಿನ್ ಕೋಕೋನಟ್ ಆಯಿಲ್ ಸವರಿ 10 ನಿಮಿಷ ಬಿಟ್ಟು ಸ್ನಾನ ಮಾಡುವುದು ಎಲ್ಲ ರೀತಿಯಿಂದಲೂ ಉಪಯುಕ್ತ. ಚೆನ್ನಾಗಿ ಮಾಗಿದ ಬಾಳೆಹಣ್ಣಿಗೆ ನಿಂಬೆರಸ, ಜೇನುತುಪ್ಪ ಸೇರಿಸಿ ಫೇಸ್ ಪ್ಯಾಕ್ ಮಾಡಿ 20 ನಿಮಿಷಗಳ ನಂತರ ತೊಳೆಯುವುದರಿಂದ ಚಳಿಗಾಲದಲ್ಲಿ ಮುಖದ ಕಾಂತಿ ಹೆಚ್ಚುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos