‘ಸಿಂಗ್’ ಚಿತ್ರದ ಹಾಡಿನ ಝಲಕ್!

‘ಸಿಂಗ್’ ಚಿತ್ರದ  ಹಾಡಿನ  ಝಲಕ್!

ಬೆಂಗಳೂರು , ಮೇ. 13, ನ್ಯೂಸ್ ಎಕ್ಸ್ ಪ್ರೆಸ್: ನಿರ್ದೇಶಕ ವಿಜಯ್ ಕಿರಣ್ ತಾಯಿ ಮತ್ತು ಮಗನ ಭಾವನಾತ್ಮಕ ಸಣ್ಣ ಝುಲಕ್ ತೋರಿಸಿದ್ದಾರೆ. ನಟ, ನಿರ್ದೇಶಕ, ಜೋಗಿ ಪ್ರೇಮ್ ಸಿನಿಮಾದಲ್ಲಿ ತಾಯಿ ಪಾತ್ರಕ್ಕೆ ತುಂಬ ಮಹತ್ವ ಕೊಡುತ್ತಾರೆ. ತಾಯಿಗಾಗಿ ಚಿತ್ರದಲ್ಲಿ  ವಿಶೇಷ ಹಾಡು ಒದಗಿಸುತ್ತಾ ಬಂದಿದ್ದಾರೆ. ತಾಯಿಯ ಹಾಡುಗಳಿಗೆ ಅವರೇ ಧ್ವನಿ ನೀಡುತ್ತಾರೆ. ‘ಎಕ್ಸ್ಕ್ಯೂಸ್ ಮಿ’ ಚಿತ್ರದ ‘ಬ್ರಹ್ಮ,ವಿಷ್ಣು,ಶಿವ,ಎದೆ ಹಾಲು ಕುಡಿದರು ಹಾಡು. ‘ಜೋಗಿ’ಚಿತ್ರದಲ್ಲಿ ‘ಬೇಡುವೆನು ವರವನ್ನು ಕೊಡು ತಾಯಿ ಜನ್ಮವನುಳು ಇಂದಿಗೂ ಎಲ್ಲರ ಅಚ್ಚುಮೆಚ್ಚು.ಈಗ ವಿಜಯ್ ಕಿರಣ್ ನಿರ್ದೇಶನದ, ಚಿರಂಜೀವಿ ಸರ್ಜಾ ನಟನೆಯ ‘ಸಿಂಗ’ಚಿತ್ರದ ಹಾಡಿಗೆ ಅಮ್ಮನ ಗುಣಗಾನ ಪ್ರೇಮ್  ಮಾಡಿದ್ದಾರೆ.

ಸಾಂಗ್ ಟೀಸ್ ರ್ ಬಿಡುಗಡೆ:

1 ನಿಮಿಷ 35 ಸೆಕೆಂಡ್  ಸಾಂಗ್ ಟೀಸರ್ ಬಿಡುಗಡೆ ಆಗಿದೆ. ‘ಈಗಾಗಲೇ ಬಿಡುಗಡೆ ಆಗಿರುವ ಮೂರು ಹಾಡುಗಳು ಸೂಪರ್ ಹಿಟ್ ಆಗಿವೆ. ಚಿರಂಜೀವಿ ಸರ್ಜಾ ನಟಿಸಿದ್ದ ‘ಅಮ್ಮ ಐ ಲವ್ ಯೂ’ ಚಿತ್ರದ ಹಾಡೂ ಸೂಪರ್ ಹಿಟ್ ಆಗಿತ್ತು. ಅದಕ್ಕೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. ಈಗ ‘ಸಿಂಗ’ ಚಿತ್ರದ ಹಾಡಿಗೂ ಅವರೇ ಸಾಹಿತ್ಯ ಬರೆದಿದ್ದಾರೆ. ಜೂನ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆ ಮಾಡಿಕೊಂಡು ತಿಂಗಳ ಕೊನೆಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ. ಚಿರಂಜೀವಿ ಸರ್ಜಾಗೆ ತಾಯಿಯಾಗಿ ತಾರಾ ನಟಿಸಿದ್ದು, ಅದಿತಿ ಪ್ರಭುದೇವ್ ನಾಯಕಿಯಾಗಿದ್ದಾರೆ. ಉದಯ್ ಮೆಹ್ತಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos