ಸರಳ ಮೊಹರಂ ಆಚರಣೆ

ಸರಳ ಮೊಹರಂ ಆಚರಣೆ

ತುಮಕೂರು:ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಹರಂ ಕಡೇ ದಿನದ ಹಬ್ಬವನ್ನು ನಗರದಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಬಾರಿ ಮೊಹರಂ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿದ್ದು, ನಗರದ ಚಿಕ್ಕಪೇಟೆಯಲ್ಲಿರುವ ಬಾಬಯ್ಯಗುಡಿಯಲ್ಲಿ ಸಕ್ಕರೆ ಓದಿಸಿ ಹಬ್ಬವನ್ನು ಆಚರಿಸಲಾಯಿತು.ಪ್ರತಿ ವರ್ಷ ಮೊಹರಂ ಕಡೇ ದಿನದ ಹಬ್ಬವನ್ನು ಅದ್ದೂರಿ ಮೆರವಣಿಗೆಯೊಂದಿಗೆ ಆಚರಿಸಲಾಗುತ್ತಿತ್ತು.

ನಗರದ ಚಾಂದಿನಿ ಚೌಕ, ಮಂಡಿಪೇಟೆ, ರಿಂಗ್ ರಸ್ತೆ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಬಾಬಯ್ಯ ಹಬ್ಬವನ್ನು ಅದ್ದೂರಿಯಾಗಿ ಮೆರವಣಿಗೆ ನಡೆಸಿ ಅಗ್ನಿಕೊಂಡದೊಂದಿಗೆ ಆಚರಿಸಲಾಗುತ್ತಿತ್ತು.ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಗ್ನಿಕೊಂಡ, ಮೆರವಣಿಗೆ ಇಲ್ಲದೆ ಚಿಕ್ಕಪೇಟೆಯ ಬಾಬಯ್ಯನ ಗುಡಿಯಲ್ಲಿ ಮೊಹರಂ ಕಡೇ ದಿನವನ್ನು ಆಚರಿಸಲಾಯಿತು.ಬಾಬಯ್ಯನಗುಡಿಯಲ್ಲಿ ಮುಸ್ಲಿಂ ಬಾಂಧವರು ಹಾಗೂ ಹಿಂದೂಗಳು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಒಂದೆಡೆ ಸೇರಿ ಸಕ್ಕರೆ ಓದಿಸಿ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos