ನಟ ದರ್ಶನ್ ಸಿನಿ ಜರ್ನಿಗೆ ಬೆಳ್ಳಿ ಹಬ್ಬ

ನಟ ದರ್ಶನ್ ಸಿನಿ ಜರ್ನಿಗೆ ಬೆಳ್ಳಿ ಹಬ್ಬ

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಸ್ವಲ್ಪ ಟಾಪ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು ಇವರಿಗೆ ಈಡೀ, ಕರ್ನಾಟಕದಾತ್ಯ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಹಾಗೂ ಅಭಿಮಾನಿಗಳು ಇವರನ್ನು ದೇವರ ರೀತಿಯಲ್ಲಿ ಪೂಜಿಸುತ್ತಾರೆ.

ಒಬ್ಬ ಹೀರೋ ಸಿನಿ ರಂಗದಲ್ಲಿ ಸರ್ವೈವ್ ಆಗೋದು ತುಂಬಾ ಚಾಲೇಂಜ್. ಅದರಲ್ಲೂ ಬೆಳ್ಳಿ ಹಬ್ಬ ಮಾಡುವಷ್ಟು ವರ್ಷ ತಮ್ಮ ಚಾರ್ಮ್ ಸ್ಟಾರಿಸಂ ಕಾಪಾಡಿಕೊಳ್ಳೋದು ಒಂದು ಸಾಹಸವೇ ಸರಿ. ಇದೀಗ ನಟ ದರ್ಶನ್ ಚಿತ್ರರಂಗದಲ್ಲಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳೋ ಟೈಂ ಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಕಳೆದಿವೆ. ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ಸೇರಿ ಹಲವು ಬಿರುದುಗಳು ಅವರಿಗೆ ಇದೆ. ಅವರು 25 ವರ್ಷಗಳಲ್ಲಿ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಅವರನ್ನು ಆರಾಧಿಸುವ ಅಭಿಮಾನಿ ವರ್ಗ ದೊಡ್ಡದಿದೆ. ಈಗ ದರ್ಶನ್ ಅವರ ಫ್ಯಾನ್ಸ್ ‘ಬೆಳ್ಳಿ ಪರ್ವ’ಆಚರಣೆಗೆ ಮುಂದಾಗಿದ್ದಾರೆ. ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯಲಿದೆ.

ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಬರುವ ಶನಿವಾರ (ಫೆಬ್ರವರಿ 17) ಸಂಜೆ 5ಕ್ಕೆ ಈ ಕಾರ್ಯಕ್ರಮ ಆರಂಭ ಆಗಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದರ್ಶನ್ ಅವರನ್ನು ಅಭಿನಂದಿಸಲು ಫ್ಯಾನ್ಸ್ ರೆಡಿ ಆಗುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos