ಸಿಲಿಕಾನ್ ನಲ್ಲಿ ಪೌರತ್ವದ ಕಿಚ್ಚು

ಸಿಲಿಕಾನ್ ನಲ್ಲಿ ಪೌರತ್ವದ ಕಿಚ್ಚು

ಬೆಂಗಳೂರು, ಡಿ. 23 : ಮಂಗಳೂರು ಶಾಂತವಾದರೆ, ಇಂದು ಸಿಲಿಕಾನ್ ನಲ್ಲಿ ಮತ್ತೆ ಪೌರತ್ವ ಕಿಚ್ಚು ವ್ಯಾಪಿಸುವ ಸಾಧ್ಯತೆಯಿದೆ.
ದೇಶವ್ಯಾಪಿ ಆವರಿಸಿರುವ ಪೌರತ್ವ ತಿದ್ದುಪಡಿ ವಿರೋಧಿ ಕಿಚ್ಚು ಬೆಂಗಳೂರಲ್ಲಿ ಧಗಧಗಿಸಿ ಹೊತ್ತಿ ಉರಿಯುತ್ತಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಇಂದು ರಾಜಧಾನಿಯಲ್ಲಿ ಮತ್ತೆ ಪ್ರತಿಭಟನೆ ನಡೆಯಲಿದೆ. 25ಕ್ಕೂ ಹೆಚ್ಚು ಸಂಘಟನೆಗಳು ಶಾಂತಿ ಸೌಹಾರ್ದ ಕಾರ್ಯಕ್ರಮ ಹಮ್ಮಿಕೊಂಡಿವೆ. ಜೊತೆಗೆ ವಿವಿಧ ಮುಸ್ಲಿಂ ಸಮುದಾಯದಿಂದ ಶಾಂತಿ ಸೌಹಾರ್ದ ಸಮಾವೇಶ ಹಮ್ಮಿಕೊಂಡಿವೆ. ಮಿಲ್ಲರ್ ರಸ್ತೆ, ಕಂಟೋನ್ಮೆಂಟ್ ಜಂಕ್ಷನ್ನಿಂದ ಹೆನ್ಸ್ ಜಂಕ್ಷನ್ ವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ಪುಲಿಕೇಶಿನಗರದ ಖುದ್ದು ಸಾಬ್ ಇದ್ಗಾ ಮೈದಾನದಲ್ಲಿ ಈ ಶಾಂತಿ ಸೌಹರ್ದ ಸಭೆ ನಡೆಯಲಿದೆ.
ಶಾಂತಿ ಸಭೆಗೆ ಈ ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನೀರಿಕ್ಷೆ ಇದೆ. ಹೀಗಾಗಿ ಯಾವುದೇ ಅಹಿತಕಾರಿ ಘಟನೆ ನಡೆಯಬಾರದೆಂದು ಸುಮಾರು ಖುದ್ದೂಸ್ ಮೈದಾನದ ಒಳಗೆ 65 ಕ್ಕೂ ಹೆಚ್ಚು ಹೈಟೆಕ್ ಸಿಸಿಟಿವಿ ಅಳವಡಿಕೆ ಸೇರಿಂದಂತೆ ಜಯಮಹಲ್ ರಸ್ತೆಯಿಂದ ನಂದಿದುರ್ಗದ ಮಾರ್ಗದ ಮೈದಾನದ ಸುತ್ತ ಮುತ್ತ 700 ಕ್ಕೂ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ,

ಫ್ರೆಶ್ ನ್ಯೂಸ್

Latest Posts

Featured Videos