ಸಿಲಿಕಾನ್ ನಲ್ಲಿ ಗುಂಡಿನ ಸದ್ದು!

ಸಿಲಿಕಾನ್ ನಲ್ಲಿ ಗುಂಡಿನ ಸದ್ದು!

ಬೆಂಗಳೂರು, ಅ. 6 : ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳ್ಳಗೆ ಪೊಲೀಸ್ ರ ಗುಂಡಿನ ಸದ್ದು ಮಾಡಿದೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ರೌಡಿಶೀಟರ್ಗಳನ್ನು ಬಂಧಿಸಿದ್ದಾರೆ. ವಿಜಯ್ ಅಲಿಯಾಸ್ ದಡಿಯಾ ವಿಜಿ ಮತ್ತು ಮೋರಿ ಅನಿ ಬಂಧಿತರು. ಇವರಿಬ್ಬರೂ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು ಎನ್ನಲಾಗಿದೆ. ದಡಿಯಾ ವಿಜಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದರೆ, ಸರಗಳ್ಳತನ ಮಾಡಲು ದಡಿಯಾ ವಿಜಿಗೆ ಮೋರಿ ಅನಿ ಸಹಾಯ ಮಾಡಿದ್ದ ಎನ್ನಲಾಗಿದೆ.
ಇವರಿಬ್ಬರೂ ಸರಗಳ್ಳತನದಲ್ಲಿ ಭಾಗಿಯಾಗಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ಇವರಿಗಾಗಿ ಶೋಧಿಸುತ್ತಿದ್ದರು. ಇವರಿಬ್ಬರೂ ಒಟ್ಟಾಗಿ ನಂದಿನಿ ಲೇಔಟ್ನ ಕೂಲಿ ನಗರದಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಜಾಲಹಳ್ಳಿ ಠಾಣೆ ಪೊಲೀಸರು, ಈ ಪ್ರದೇಶವನ್ನು ಸುತ್ತುವರಿದು ಅವರಿಬ್ಬರನ್ನು ಬಂಧಿಸಲು ಮುಂದಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos