ಸಿಲಿಕಾನ್ ಸೀಲ್ ಡೌನ್

ಸಿಲಿಕಾನ್ ಸೀಲ್ ಡೌನ್

ಬೆಂಗಳೂರು, ಏ. 10 : ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲ ದಿನಗಳಲ್ಲಿ ಲಾಕ್ಡೌನ್ನಿಂದ ಸೀಲ್ ಡೌನ್ ಆಗುವ ಸಾಧ್ಯತೆ ಇದೆ.
ಸದ್ಯಕ್ಕೆ ಈ ಬಗ್ಗೆ ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲವಾದರೂ ಸಿಲಿಕಾನ್ ಸಿಟಿ ಡೇಂಜರ್ ಝೋನ್ನಲ್ಲಿದೆ. ಹೋಮ್ ಕ್ವಾರೆಂಟೈನ್ನಲ್ಲಿರುವವರಿಗೆಲ್ಲ ಸೋಂಕು ಇರುವುದು ಪಕ್ಕಾ ಆದರೂ ಕೂಡ ಬೆಂಗಳೂರು ಸೀಲ್ ಡೌನ್ ಆಗುವ ಸಾಧ್ಯತೆ ಹೆಚ್ಚಿದೆ.
ಇನ್ನು ಇದಕ್ಕೆ ಪೂರಕವೆಂಬಂತೆ ನಗರದಲ್ಲಿ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲಾ ಏರಿಯಾಗಳ ಸಬ್ವೇಗಳನ್ನ ಬಂದ್ ಮಾಡುತ್ತಿದ್ದಾರೆ. ಏರಿಯಾಯಿಂದ ಏರಿಯಾಗೆ ಇರೋ ಸಂಪರ್ಕ ಕಡಿತ ಮಾಡ್ತಿದ್ದಾರೆ. ಬರೀ ಮೇನ್ ರೋಡ್ ಅಷ್ಟೇ ಓಪೆನ್ ಇರಲಿದ್ದು, ಯಾವುದೇ ವಾಹನ ರೋಡಿಗಿಳಿದರೂ ಮುಖ್ಯ ರಸ್ತೆಗೆ ಬರಲೇಬೇಕೆಂಬುವ ಪ್ಲಾನ್ ನಡೆದಿದೆ. ಸುಮ್ ಸುಮ್ನೆ ರೋಡಿಗಿಳಿಯುವ ಬೈಕ್ ಸವಾರರ ಕಾಟ ತಪ್ಪಿಸಲು ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಸೀಲ್ ಡೌನ್ ಅಂದ್ರೇನು..? ಸೀಲ್ ಡೌನ್ ಆದ್ರೆ ಆಗುವ ಸಮಸ್ಯೆಗಳೇನು..?
ಏ.14ರಂದು ಬೆಂಗಳೂರು ರೆಡ್ ಝೋನ್ ಎಂದು ಸಾಬೀತಾದರೆ(ಕೊರೊನಾ ಸೋಂಕಿತರ ಸಂಖ್ಯೆ ಅತೀ ಹೆಚ್ಚಾಗಿದ್ದಲ್ಲಿ) ಸೀಲ್ ಡೌನ್ ಮಾಡುವುದಂತೂ ಖಚಿತ. ಸೀಲ್ ಡೌನ್ ಆದಾಗ ತರಕಾರಿ, ಬೇಳೆ ಕಾಳು ತರಲೂ ಕೂಡ ಹೊರಬರುವಂತಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos