ಸಂಜೆಯಾಗ್ತಿದ್ದಂತೆ ಸಿಲಿಕಾನಲ್ಲಿ ವರುಣನ ಅಬ್ಬರ

ಸಂಜೆಯಾಗ್ತಿದ್ದಂತೆ ಸಿಲಿಕಾನಲ್ಲಿ ವರುಣನ ಅಬ್ಬರ

ಬೆಂಗಳೂರು, ಅ. 5 : ಸಿಲಿಕಾನ್ ಸಿಟಿ ಯಲ್ಲಿ ವರುಣನ ಅಬ್ಬರ ಜೋರಾಗಿದೆ. ಹಳದಿ ಅಲರ್ಟ್ ನಂತೆಯೇ ಮಳೆರಾಯ ಗುಡುಗು-ಮಿಂಚಿನಿಂದ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮಲ್ಲೇಶ್ವರಂ, ಯಶವಂತಪುರ, ಕಾರ್ಪೊರೇಷನ್, ಗೊರಗುಂಟೆಪಾಳ್ಯ, ವಿಧಾನಸೌಧ, ರಾಜಕುಮಾರ್ ಸಮಾಧಿ ರೋಡ್, ಸುಂಕದಕಟ್ಟೆ, ಬಿಇಎಲ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆ ಜೋರು ಮಳೆಯಾಗಿದೆ.
ಆನೇಕಲ್ನಲ್ಲೂ ಮಳೆ ಅಬ್ಬರಿಸಿದೆ. ಸಂಜೆ ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡು ವಾಹನ ಸವಾರರು ಪರದಾಡಿದರು. ಶಿವಾನಂದ ಸರ್ಕಲ್ನಲ್ಲಿ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದವು. ಸವಾರರು ಬೈಕ್ ಬಿಟ್ಟು ಪ್ಲೈಓವರ್, ಸ್ಕೈವಾಕ್, ಮರದಡಿ ನಿಂತು ರಕ್ಷಣೆ ಪಡೆದರು. ಬಳ್ಳಾರಿ ರಸ್ತೆಯ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ಬಳಿ ರಸ್ತೆಯಲ್ಲಿ ಕೆರೆಯಂತೆ ಹರಿಯಿತು. ಮೆಜೆಸ್ಟಿಕ್ ಟು ವಿಜಯನಗರ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಓಕುಳಿಪುರಂ ಬಳಿ ಟ್ರಾಫಿಕ್ಗೆ ವಾಹನ ಸವಾರರು ಪರದಾಡಿದರು. ಬಾಣಸವಾಡಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ವಾಹನ ಜಖಂ ಆಯ್ತು. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos