ಸಿಲಿಕಾನ್ ಸಿಟಿಯಲ್ಲಿ 8 ಸಾವಿರ ಸಿಸಿಟಿವಿ ಅಳವಡಿಕೆ

ಸಿಲಿಕಾನ್ ಸಿಟಿಯಲ್ಲಿ 8 ಸಾವಿರ ಸಿಸಿಟಿವಿ ಅಳವಡಿಕೆ

ಬೆಂಗಳೂರು, ಮಾ. 13, ನ್ಯೂಸ್ ಎಕ್ಸ್ ಪ್ರೆಸ್:  ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ದಿನ ಹತ್ತಿರವಾಗುತ್ತಿದಂತೆ ನಮ್ಮಸಿಲಿಕಾನ್ ಸಿಟಿ ಬೆಂಗಳೂರಿನ ಸುತ್ತಮುತ್ತ ಮುಂಜಾಗೃತಾ ಕ್ರಮವಾಗಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಬೆಂಗಳೂರಿನಲ್ಲಿ ಒಟ್ಟು 5 ಸಾವಿರ ಸಿಸಿಟಿವಿಗಳು ಚುನಾವಣೆಗೆ ಕೆಲಸ ಮಾಡಲಿವೆ. ಬಿಬಿಎಂಪಿ ವತಿಯಿಂದ 198 ವಾರ್ಡ್ ಗಳಲ್ಲಿ 4 ಸಾವಿರ ಸಿಸಿಟಿವಿಗಳಿವೆ. ಇನ್ನು ಟ್ರಾಫಿಕ್ ಜಂಕ್ಷನ್ ಗಳಲ್ಲೂ 1 ಸಾವಿರಕ್ಕೂ ಹೆಚ್ಚುನ ಸಿಸಿಟಿವಿ ಇದೆ. ಈ ಎಲ್ಲ ಕ್ರಾಮೆರಾಗಳು ಚುನಾವಣೆಗಾಗಿ ಕೆಲಸ ಮಾಡುತ್ತವೆ ಎನ್ನಲಾಗಿದೆ.

ಸಿಸಿಟಿವಿ ಅಳವಡಿಕೆಯಿಂದ ಚುನಾವಣಾ ಸಮಯದಲ್ಲಿ ಮತದಾರರಿಗೆ ಅಕ್ರಮ ಹಣ, ಮದ್ಯ, ಬಟ್ಟೆ, ಸೀರೆ ಇನ್ನಿತರ ವಸ್ತುಗಳನ್ನು ಕೊಡುವುದಕ್ಕೆ ಆಗಲ್ಲ. ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos