ಸಿಲಿಕಾನ್ ಸಿಟಿ ಬಂದ್ ಗೆ ಕರೆ!

ಸಿಲಿಕಾನ್ ಸಿಟಿ ಬಂದ್ ಗೆ ಕರೆ!

ಬೆಂಗಳೂರು,ಸೆ. 5:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು 5 ಗ್ಯಾರಂಟಿ ಘೋಷಣೆಗಳನ್ನು ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ನೀಡಿದ ಐದು ಗ್ಯಾರಂಟಿ ಘೋಷಣೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ.
ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರೆಂಟಿಗಳಲ್ಲೊಂದಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ನೀಡಲಾಗಿದೆ. ಇದರಿಂದ ಖಾಸಗಿ ವಾಹನ ಸಂಘಗಳ ಒಕ್ಕೂಟದಿಂದ ಸೆಪ್ಟೆಂಬರ್ 11 ರಂದು ಬೆಂಗಳೂರಿನಲ್ಲಿ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನಲೆ ಇಂದು ಬೆಂಗಳೂರು ಬಂದ್ ಪೋಸ್ಟರ್ನ್ನು ಸಂಘಟನೆಗಳು ಬಿಡುಗಡೆ ಮಾಡಿ ಸಕಲ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ಗಳಿಗೆ ಕಪ್ಪು ಬಾವುಟ ಕಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಸೆ.11ರಂದು ಬೆಂಗಳೂರು ಬಂದ್ಗೆ ಕರೆ ಪೋಸ್ಟರ್ ಬಿಡುಗಡೆ ಮಾಡಿ, ಬಾವುಟ ಹಂಚಿಕೆ ಆಗಿದೆ. ಬಂದ್ ಸಂಬಂಧ 32 ಒಕ್ಕೂಟಗಳ ಅಧ್ಯಕ್ಷರು ಮತ್ತು ಸದಸ್ಯರು ಭಾಗಿಯಾಗಿದ್ದು, ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಇನ್ನು ಸೆ.11 ರಂದು ಆಟೋ, ಟ್ಯಾಕ್ಸಿ, ಮಿನಿ ಟ್ರಕ್, ಖಾಸಗಿ ಬಸ್ಗಳ ಸಂಚಾರ ಬಂದ್ ಆಗಲಿದೆ ಎಂದಿದ್ದಾರೆ.
ಮಧ್ಯರಾತ್ರಿಯಿಂದಲೇ ಬಂದ್ ಶುರುವಾಗಲಿದೆ. ಈ ಹಿನ್ನಲೆ ಇಂದು ಬಂದ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos