ಸಿಡಿಲು ಬಡಿದು ಕೋಚ್ ಸಾವು..!

ಸಿಡಿಲು ಬಡಿದು ಕೋಚ್ ಸಾವು..!

ಜಾರ್ಖಂಡ್, ಅ.20 : ಅಭ್ಯಾಸದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಕೋಚ್ ಒಬ್ಬರು ಮೈದಾನದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿ ನಡೆದಿದೆ. ಮಾಜಿ ಸಂತೋಷ್ ಟ್ರೋಫಿ ಫುಟ್ಬಾಲಿಗ ಅಭಿಜಿತ್ ಗಂಗೂಲಿ (53) ಮೃತ ದುರ್ದೈವಿ. ಈ ಘಟನೆ ವೇಳೆ ಇಬ್ಬರು ಆಟಗಾರರಿಗೂ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ಇಲ್ಲಿನ ಬಿರ್ಸಾ ಮುಂಡಾ ಮೈದಾನದಲ್ಲಿ ಬೆಳಗ್ಗೆ 7.30ರ ವೇಳೆಗೆ ಧನ್ಬಾದ್ ರೈಲ್ವೆ ಡಿವಿಷನ್ ಫುಟ್ಬಾಲ್ ತಂಡ ಅಭ್ಯಾಸ ನಡೆಸುತ್ತಿತ್ತು. ಕೋಚ್ ಅಭಿಜಿತ್ ಆಟಗಾರರಿಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಮಳೆ ಆರಂಭವಾಗಿ ಸಿಡಿಲು ಬಡಿದ ಕಾರಣ, ಗಂಗೂಲಿ ಪ್ರಜ್ಞೆ ತಪ್ಪಿ ಬಿದ್ದರು. ಆಸ್ಪತ್ರೆಗೆ ಕೊರೆದೊಯ್ಯಲಾಯಿತು. ಆದರೆ ಅವರು ಮಾರ್ಗ ಮಧ್ಯಯೇ ಪ್ರಾಣಬಿಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. …

ಫ್ರೆಶ್ ನ್ಯೂಸ್

Latest Posts

Featured Videos