ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ?

ಬೆಂಗಳೂರು, ಜು. 31: ಕನ್ನಡಿಗ ವಿ.ಜಿ ಸಿದ್ದಾರ್ಥ ಅವರ ಯಶಸ್ವಿ ಬದುಕಿನ ದುರಂತ ಅಂತ್ಯಕ್ಕೆ ವಿವಿಧ ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. “ಈ ಸಾವು ನ್ಯಾಯವೇ?” ಎಂದು ಪ್ರಶ್ನಿಸುತ್ತಿದ್ದಾರೆ. ನಟ, ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಸಿದ್ದಾರ್ಥ ಅವರ ಅಗಲಿಕೆಯ ನೋವನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ತೋಡಿಕೊಂಡಿದ್ದಾರೆ. ದುಡ್ಡು ಕಾಸು ಎನ್ನುವುದು ಮನುಷ್ಯ ಮಾಡಿಕೊಂಡಿದ್ದು. ಮನುಷ್ಯನ ಅನುಕೂಲಕ್ಕಾಗಿ ಮತ್ತು ನೆಮ್ಮದಿ ಕಳೆದುಕೊಳ್ಳಲು. ದುಡ್ಡಿನ ಬೃಹತ್ ಸಾಮ್ರಾಜ್ಯ ಕಟ್ಟಲು ಹೋಗಿ ಅದರ ಚಕ್ರವ್ಯೂಹ ದಲ್ಲಿ ಸಿಕ್ಕಿ ಹೋಗೇಬಿಟ್ಟಿರಲ್ಲ ಸಿದ್ಧಾರ್ಥ ಸಾರ್.

ನೀವು ಸಮಾಜ ನಿರ್ಮಿತ ದುಡ್ಡು ಕಾಸಿನ ಕಷ್ಟ ಕ್ಕೆ ಹೆದರಿ, ಅವಮಾನ ಕ್ಕೆ ಹೆದರಿ, ಪ್ರಾಣ ಕಳೆದು ಕೊಂಡು ಬಿಟ್ಟಿರಲ್ಲ , ಸಂಕಟವಾಗುತ್ತದೆ ಎಲ್ಲ ಆಸ್ತಿ ಕೊಡ ಬೇಕಾದವರಿಗೆ ಬರೆದು ಕೊಟ್ಟು Insolvency ತೆಗೆದುಕೊಂಡರೆ ಮುಗಿದು ಹೋಗುತ್ತಿತ್ತು. ಮತ್ತೊಂದು ಹೊಸ ಅಧ್ಯಾಯ ಶುರು ಮಾಡಲು ಸಾಧ್ಯವಾಗುತ್ತಿತ್ತು. ಪ್ರಾಣವನ್ನೇ ಕಳೆದುಕೊಂಡು ಬಿಟ್ಟಿರಲ್ಲ ಸಾರ್.

ಸುಮಾರು ಐವತ್ತು ಸಾವಿರ ಜನಕ್ಕೆ ಉದ್ಯೋಗ ಕೊಟ್ಟಿದ್ದ ಕನ್ನಡಿಗ ನೀವು. ಜಗತ್ತು ಬೆರಗಾಗುವಂಥ,ಇಂಥದ್ದೇ ವಿದೇಶಿ ಉದ್ಯಮಗಳಿಗೆ ಸೆಡ್ಡು ಹೊಡೆದು ಗೆದ್ದಿದ್ದವರು ನೀವು, ನಾನು ಸೋತು ಅವಮಾನ ಅನುಭವಿಸಿ ಖಿನ್ನನಾಗಿದ್ದಾಗ ಅನೇಕ ಬಾರಿ ನಿಮ್ಮ ಸಿಸಿಡಿ ಯಲ್ಲಿ ಗೆಳೆಯರ ಜತೆ ಕೂತು, ಹರಟೆ ಹೊಡೆದು ಮನಸ್ಸಿಗೆ ಗೆಲುವು ಪಡೆದು ಬಂದಿದ್ದೇನೆ. ನನ್ನಂಥ ಎಷ್ಟೋ ಜನ ನೀವು ಉದಾಹರಣೆ ಆಗಿದ್ರಿ ಸರ್.

 

ಫ್ರೆಶ್ ನ್ಯೂಸ್

Latest Posts

Featured Videos