ಸಿದ್ದು ಮತ್ತೆ ಸಿಎಂ ಆಗ್ತಾರಾ?

ಸಿದ್ದು ಮತ್ತೆ ಸಿಎಂ ಆಗ್ತಾರಾ?

ಬೆಂಗಳೂರು, ಜು. 11: ಕಳೆದ ಒಂದು ವಾರದಿಂದ ರಾಜ್ಯಕೀಯದಲ್ಲಿ ಕೇಲ ಶಾಸಕರುಗಳು ಕ್ಷಣಕ್ಕೊಂದು ಬಣ್ಣದ ಬದಲಿಸುವ ಉಸರವಳ್ಳಿಯ ಹಾಗೆ ಬಣ್ಣನ ಬದಲಿಸುತ್ತಿದ್ದಾರೆ. ಹೌದು, ರಾಜ್ಯದ ರಾಜ್ಯಕೀಯದಲ್ಲಿ ಹೇಳಲಾಗದಂತಹ ಬದಲಾವಣೆಗಳು ನಡೆಯುತ್ತಿದೆ. ಈಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂಬ ನಿಟ್ಟಿನಲ್ಲಿ ಅಂತಿಮ ಕಸರತ್ತು ನಡೆಸಿರುವ ಕಾಂಗ್ರೆಸ್ ನಾಯಕರು, ಜೆಡಿಎಸ್ ಮುಂದೆ ಹೊಸ ಪ್ರಸ್ತಾವನೆಯೊಂದನ್ನು ಇಟ್ಟಿದ್ದಾರೆಂದು ಹೇಳಲಾಗಿದೆ.

ಬಂಡಾಯವೆದ್ದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಹುತೇಕ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರಾಗಿದ್ದು, ಒಂದೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರ ಹೆಸರನ್ನು ಘೋಷಿಸಿದರೆ ಈ ಶಾಸಕರುಗಳು ತಮ್ಮ ನಿರ್ಧಾರವನ್ನು ಬದಲಿಸಬಹುದೆಂಬ ವಿಶ್ವಾಸದಲ್ಲಿರುವ ಕಾಂಗ್ರೆಸ್ ನಾಯಕರು, ಈ ಕುರಿತು ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತನಾಡಿದ್ದಾರೆಂದು ತಿಳಿದು ಬಂದಿದೆ.

ದೇವೇಗೌಡರನ್ನು ಭೇಟಿ ಮಾಡಿರುವ ಎಐಸಿಸಿ ನಾಯಕ ಗುಲಾಂ ನಬಿ ಆಜಾದ್, ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರ ಹೆಸರನ್ನು ಘೋಷಣೆ ಮಾಡಿದರೆ ರಾಜಿನಾಮೆ ನೀಡಿರುವ ಶಾಸಕರುಗಳು ವಾಪಸ್ ಬರುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡುವ ಯತ್ನ ನಡೆಸಿದ್ದಾರೆಂದು ಹೇಳಲಾಗಿದೆ.

ಈಗ ರಾಜೀನಾಮೆ ನೀಡಿರುವ ಬಹುತೇಕ ಶಾಸಕರುಗಳು, ಕುಮಾರಸ್ವಾಮಿಯವರು ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ ಎಂಬ ಅಸಮಾಧಾನ ಹೊಂದಿದ್ದು, ಜೊತೆಗೆ ಕುಮಾರಸ್ವಾಮಿ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಶಾಸಕರ ಸಮಸ್ಯೆಗಳಿಗೆ ಸ್ಪಂದಿಸಲು ಕೈಗೆ ಸಿಗುತ್ತಿಲ್ಲ ಎಂಬ ಆರೋಪವಿದೆ. ಹೀಗಾಗಿ ಮುಖ್ಯಮಂತ್ರಿಯವರನ್ನು ಬದಲಿಸುವ ಮೂಲಕ ಶಾಸಕರನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದು, ಇದಕ್ಕೆ ಜೆಡಿಎಸ್ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos