ಸಿದ್ಧಗಂಗಾ ಮಠಕ್ಕೆ ರೈತಾಪಿ ಜನರೊಂದಿಗೆ‌ ಅವಿನಾಭಾವ‌ ಸಂಬಂಧ

ಸಿದ್ಧಗಂಗಾ ಮಠಕ್ಕೆ ರೈತಾಪಿ ಜನರೊಂದಿಗೆ‌ ಅವಿನಾಭಾವ‌ ಸಂಬಂಧ

ಜಿ.ಎನ್ ನಾಗರಾಜ್

ಸಿದ್ಧಗಂಗಾ_ಮಠ ಹದಿನಾರನೆಯ ಶತಮಾನದ ತೋಂಟದ ಸಿದ್ಧಲಿಂಗ ಶ್ರೀಗಳ ಏಳು‌ನೂರು ಯತಿಗಳ ಪರಂಪರೆಗೆ‌ ಸೇರಿದ ಮಠ. 
ಮಕೂರು, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ತಮಿಳುನಾಡಿನಲ್ಲಿಯೂ ಲಿಂಗಾಯತ ಧರ್ಮವನ್ನು ಹರಡಿದ ಲಿಂಗಾಯತ ಯತಿ ಪರಂಪರೆ ಇದು. 

ತುಮಕೂರು ಜಿಲ್ಲೆಯ ಸಿದ್ಧಗಂಗೆ, ಗುಬ್ಬಿ, ಗೂಳೂರು , ಮೈಸೂರು ಜಿಲ್ಲೆಯ ಸುತ್ತೂರು, ಚಾಮರಾಜನಗರದ ಹರದನಹಳ್ಳಿ, ಹೊಸೂರಿನ ಬಳಿಯ ಗುಮ್ಮಳಾಪುರಗಳು ಈ ಪರಂಪರೆಯ ಕೇಂದ್ರಗಳು. 

ಮಹತ್ವದ‌ ಗ್ರಂಥವಾದ‌ ಶೂನ್ಯ ಸಂಪಾದನೆ ಮತ್ತನೇಕ ಗ್ರಂಥಗಳೂ ಈ ಪರಂಪರೆಯ ಕೊಡುಗೆಗಳು. 
ಶಿವಕುಮಾರ ಸ್ವಾಮೀಜಿಯವರ ಗುರುಗಳಾದ‌ ಉದ್ದಾನ ಶಿವಯೋಗಿಗಳು ಇದೇ ಪರಂಪರೆಯವರು. 
ವಚನ ತತ್ವಗಳನ್ನು ಈ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಲು ಈ ಮಠ ಮತ್ತು‌ ಈ ಪರಂಪರೆಯ ಕೊಡುಗೆ.

ತುಮಕೂರು ಜಿಲ್ಲೆಯನ್ನು ಒಳಗೊಂಡಿದ್ದ ನೊಳಂಬ ರಾಜ್ಯದ ರೈತರಾದ ನೊಣಬರು ಮತ್ತು‌ ತುಮಕೂರು ಭಾಗವಾಗಿದ್ದ ಮಧ್ಯಕಾಲೀನ ಯುಗದ ವಾಣಿಜ್ಯ ಹೆದ್ದಾರಿಯ ಮೂಲಕ ವ್ಯಾಪಾರ ಮಾಡುತ್ತಿದ್ದ ಲಿಂಗಾಯತ ಬಣಜಿಗರು ಮತ್ತಿತರ ಸಮುದಾಯಗಳು ಈ ಮಠದ ಭಕ್ತ ವಲಯಕ್ಕೆ‌ ಸೇರಿದವರು. 

ಹೀಗೆ ಈ ಮಠಕ್ಕೆ ರೈತಾಪಿ ಜನರೊಂದಿಗೆ‌ ಅವಿನಾಭಾವ‌ ಸಂಬಂಧ. ಈ ಪ್ರದೇಶ ಬಹು ಕಾಲದಿಂದ ಬರಗಾಲಕ್ಕೆ ತುತ್ತಾದ ಪ್ರದೇಶ. ಈ ಪ್ರದೇಶದ ರೈತಾಪಿ ಜನರು ಶಿಕ್ಷಣ ವಂಚಿತರಾಗಿದ್ದರು. ಇದು ಶಿವಕುಮಾರ ಸ್ವಾಮಿಗಳ ಸ್ವಾನುಭವವೂ ಹೌದು. 

ಈ ಪ್ರದೇಶದ ಜನರ ಅಭಿವೃದ್ಧಿಗೆ‌ ಶಿಕ್ಷಣ, ಅದಕ್ಕೆ‌ ಅವಶ್ಯವಾದ ಶಾಲೆ , ಕಾಲೇಜುಗಳು, ವಿದ್ಯಾರ್ಥಿ ನಿಲಯಗಳನ್ನು ಬೆಳೆಸಲು ಅವರು ಶ್ರಮಿಸಿದರು. ಈ ವಿದ್ಯಾರ್ಥಿಗಳು ಇಂದು‌ ಸರ್ಕಾರಿ ಆಡಳಿತ, ಶಿಕ್ಷಣ‌ ಮೊದಲಾದ ರಂಗಗಳ ಭಾಗವಾಗಿದ್ದಾರೆ. 

ಅದೇ ಸಮಯದಲ್ಲಿ ಈ ಮಠದ ಭಕ್ತ ಸಮಯದಾಯದಲ್ಲಿನ ಭೂ ಮಾಲಕ, ವ್ಯಾಪಾರಿ ಹಿತಗಳ ನಡುವೆ ತಿಕ್ಕಾಟಗಳು ನಡೆಯುತ್ತಿದ್ದವು. ಇದಕ್ಕೆ ಹಿಂದಿನ ಕಿರಿಯ ಸ್ವಾಮಿಗಳಿಗೂ ಶಿವಕುಮಾರ ಸ್ವಾಮಿಗಳಿಗೂ ನಡೆದ‌ ಸಂಘರ್ಷದ ಕಹಿ ಪ್ರಸಂಗ ಇದಕ್ಕೆ ಒಂದು ಉದಾಹರಣೆ.

ಫ್ರೆಶ್ ನ್ಯೂಸ್

Latest Posts

Featured Videos