ಸಿದ್ದಯ್ಯಪುರಣಿಕರ ಸಾಹಿತ್ಯ ಸೇವೆ ಅನನ್ಯ: ಕಂಬಾರ

ಸಿದ್ದಯ್ಯಪುರಣಿಕರ ಸಾಹಿತ್ಯ ಸೇವೆ ಅನನ್ಯ: ಕಂಬಾರ

ಬೆಂಗಳೂರು,  ಜು. 31 : ಕೆಲವು ಸಾಹಿತಿಗಳಲ್ಲಿ ಸಿದ್ದಯ್ಯಪುರಣಿಕರೂ ಒಬ್ಬರೂ ಎಂದು ಜ್ಞಾನ ಪೀಠ ಪ್ರಶಸ್ತಿ ಪುರಸ್ಕ್ರತ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖ ಕಂಬಾರರು ಕೊಂಡಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದು, ಡಾ, ಸಿದ್ದಯ್ಯ ಪುರಾಣಿಕ ಶ್ರೀ ಮಿರ್ಜಿ ಅಣ್ಣಾರಾಯರ ಹಾಗೂ ಡಾ.ರಾ.ಯ ಧಾರವಡಕರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುರಾಣಿಕರು 50ಕ್ಕೂ ಹೆಚ್ಚು ಕೃತಿ ಮತ್ತು 1500 ವಚನ ಬರೆದಿದ್ದಾರೆ. ಅವರ ಸಾಹಿತ್ಯ ಸೇವೆ ಅನನ್ಯಎಂದರು. ಒತ್ತಡ ಬದುಕಿನಲ್ಲಿ ಸಾಹಿತ್ಯ ರಚಿಸುವ ಅಭಿರುಚಿ ಬೆಳಸಿಕೊಂಡಿದ್ದ ಕೆಲವು ಸಾಹಿತಿಗಳಲ್ಲಿ ಸಿದ್ದಯ್ಯಪುರಾಣಿಕ ಒಬ್ಬರು ಎಂದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವ ರತ್ನ ರಾಮ್ ಹಾಗೂ ಸಿದ್ದಯ್ಯಪುರಾಣಿ ಪ್ರಮುಖರಾಗಿದ್ದು, ಅವರ ಸ್ಥಾನದಲ್ಲಿ ಸಿದ್ದಯ್ಯಪುರಾಣಿಕರು ತಮ್ಮದೇ ಸಾಹಿತ್ಯ ಕನ್ನಡ ತಾಯಿಗೆ ಅರ್ಪಿಸಿದ್ದಾರೆ. ಅವರ ಮೇಲೆ ಹರ್ಡೆಕರ್ ಮಂಜಪ್ಪನವರ ಪ್ರಭಾವವಿತ್ತು ಎಂದರು.
ನಂತರ ಹಿರಿಯ ಕವಿ ಸಿದ್ಧಲಿಂಗಯ್ಯ ಮಾತನಾಡಿ, ಸಿದ್ದಯ್ಯಪುರಾಣಿಕ ಅವರು ಅಸಾಮಾನ್ಯ ಚೈತನ್ಯ. ಅವರು ನವ್ಯ ನವೋದಯ ಕವಿ ಅಷ್ಟ ಅಲ್ಲ, ಅವರು ವಿಶೇಷವಾಗಿ ಪ್ರಗತಿಪರ ಒಲವಿದ್ದವರು. ಕನ್ನಡ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದವು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos